ರಾಜಕಾರಣಿಗಳು (politicians) ರಾಜಕಾರಣಕ್ಕಾಗಿ ಧರ್ಮ ಬಳಸಿಕೊಳ್ಳುವುದು ತಪ್ಪು. ಧರ್ಮ ಮತ್ತು ರಾಜಕಾರಣ ಬೇರೆ ಬೇರೆಯಾಗಿ ಇರಬೇಕು. ಆದರೆ, BJP ಗರಿಗೆ ರಾಜಕಾರಣಕ್ಕಾಗಿ ಧರ್ಮ ಬೇಕಿದೆಯೇ ಹೊರತು ಬದುಕಿನ ಬದಲಾವಣೆಗೆ ಅಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ (D. K. Shivakumar) ತಿಳಿಸಿದರು.
ಅರ್ಚಕರ, ಆಗಮಿಕರ ಮತ್ತು ಉಪದಿವಂತರ ಒಕ್ಕೂಟದ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು ಇದೇ ಕಾರಣದಿಂದ ಅರ್ಚಕರ, ದೇವಸ್ಥಾನಗಳ (Temples) ಅಭಿವೃದ್ಧಿಗೆ ಕಾಂಗ್ರೆಸ್ (Congress) ಜಾರಿಗೆ ತಂದ ವಿಧೇಯಕವನ್ನು BJP ವಿರೋಧಿಸಿದೆ ಎಂದರು.
ಕಾಂಗ್ರೆಸ್ ಸರಕಾರ ಗೃಹ ಜ್ಯೋತಿ ಯೋಜನೆ ಮೂಲಕ ರಾಜ್ಯದ ಬಡ, ಮಧ್ಯಮ ವರ್ಗದ ಜನರ ಮನೆಯನ್ನು ಬೆಳಗುತ್ತಿದೆ. ಐದು ಗ್ಯಾರಂಟಿಗಳ ಮೂಲಕ ಜನತೆಗೆ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿದ್ದೇವೆ.
ಬಿಜೆಪಿಗರಂತೆ ನಾವು ಭಾವನೆಗಳ ಮೇಲೆ ರಾಜಕಾರಣ ಮಾಡದೆ ಜನತೆಯ ಬದುಕನ್ನು ಹಸನು ಮಾಡಲು ರಾಜಕಾರಣ ಮಾಡುತ್ತೇವೆ, ಎಂದು ಡಿಸಿಎಂ ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ, ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಅರ್ಚಕರು, ಆಗಮಿಕರು ಆಗಮಿಸಿದ್ದರು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಡಿಸೆಂಬರ್ ತಿಂಗಳಿಂದ ತಸ್ತೀಕ್ ಹಣವನ್ನು ನೇರವಾಗಿ ಅರ್ಚಕರ ಖಾತೆಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ವರ್ಷಕ್ಕೆ 1,500 ಮಂದಿ ಅರ್ಚಕರಿಗೆ ಕಾಶಿ ಯಾತ್ರೆಗೆ ಅನುವು ಮಾಡಿಕೊಡಲಾಗಿದೆ.
ಎ, ಬಿ ಗ್ರೇಡ್ ದೇವಸ್ಥಾನಗಳ ನಿಧಿಯನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಕನಿಷ್ಠ 2-3 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಕ್ರಮ ವಹಿಸಲಾಗಿದೆ.
ಒಂದು ಸಾವಿರ ಮಂದಿ ಅರ್ಚಕರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡಲಾಗುವುದು. ಸೋರುವ ದೇವಾಲಯಗಳ ಕಟ್ಟಡ ದುರಸ್ತಿಗೆ ಅಗತ್ಯ ಹಣ ನೀಡಲಾಗುವುದು. ಹಾಗೆಯೇ ಅರ್ಚಕರ ನಾನಾ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ”ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಯಲ್ಲ. ಹಿಂದೂ ಧರ್ಮದ ವಿಚಾರಧಾರೆಗಳ ವಿರುದ್ಧವೂ ನಮ್ಮ ಪಕ್ಷ ಇಲ್ಲ.
ಮುಜರಾಯಿ ಇಲಾಖೆಗೆ ಮಂತ್ರಿಯಾಗಿ ಬಂದವರು ಮುಂದೆ ಸಚಿವ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ, ಮುಂದಿನ ಹತ್ತು ವರ್ಷಗಳ ಕಾಲ ಅವರೇ (ರಾಮಲಿಂಗಾರೆಡ್ಡಿ) ಮಂತ್ರಿಯಾಗಿ ಇರಲಿದ್ದಾರೆ,” ಎಂದು ಭವಿಷ್ಯ ನುಡಿದರು.