Oslo: ವೆನೆಜುವೆಲಾದ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹೋರಾಡಿ, ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆ ತರಲು ಶ್ರಮಿಸಿದ ರಾಜಕಾರಣಿ ಮತ್ತು ಹಕ್ಕುಗಳ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೊ (Maria Corina) ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಇದರಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿರಾಶೆ ಉಂಟಾಗಿದೆ.
ಮಾರಿಯಾ ಕೊರಿನಾ ಮಚಾದೊ ಪರಿಚಯ
- ವೆನೆಜುವೆಲಾದ ಖ್ಯಾತ ರಾಜಕಾರಣಿ, ಕೈಗಾರಿಕಾ ಎಂಜಿನಿಯರ್ ಮತ್ತು ಮಾನವ ಹಕ್ಕುಗಳ ವಕೀಲ.
- 1967 ಅಕ್ಟೋಬರ್ 7 ರಂದು ಕ್ಯಾರಕಾಸ್ ನಲ್ಲಿ ಜನಿಸಿದರು.
- ಮನಶ್ಶಾಸ್ತ್ರಜ್ಞ ಕೊರಿನಾ ಪ್ಯಾರಿಸ್ಕಾ ಮತ್ತು ಉದ್ಯಮಿ ಹೆನ್ರಿಕ್ ಮಚಾದೊ ಜುಲೋಗಾ ದಂಪತಿಯ ಹಿರಿಯ ಪುತ್ರಿ.
- ಬೆಲ್ಲೊ ಕ್ಯಾಥೋಲಿಕ್ ವಿಶ್ವವಿದ್ಯಾನಿಲಯದಿಂದ ಕೈಗಾರಿಕಾ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ.
- ಕ್ಯಾರಕಾಸ್ನಲ್ಲಿರುವ ಇನ್ಸ್ಟಿಟ್ಯೂಟೊ ಡಿ ಎಸ್ಟುಡಿಯೋಸ್ ಸುಪೀರಿಯರ್ಸ್ ಡಿ ಅಡ್ಮಿನಿಸ್ಟ್ರೇಷನ್ (IESA) ನಿಂದ ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ರಾಜಕೀಯ ಪ್ರಯಾಣ
- 2002 ರಲ್ಲಿ ಸ್ಮೇಟ್ ಎಂಬ ಸಂಘಟನೆಯೊಂದಿಗೆ, ಚುನಾವಣಾ ಮೇಲ್ವಿಚಾರಣೆ ಮತ್ತು ನಾಗರಿಕ ಹಕ್ಕುಗಳ ಅರಿವು ಮೂಡಿಸಲು ರಾಜಕೀಯದ ಆರಂಭ.
- 2013 ರಲ್ಲಿ ತಮ್ಮದೇ ಉದಾರವಾದಿ ರಾಜಕೀಯ ಪಕ್ಷ, ವೆಂಟೆ ವೆನೆಜುವೆಲಾದ ರಾಷ್ಟ್ರೀಯ ಸಂಯೋಜಕ ಆಗಿ ಸ್ಥಾಪನೆ.
- ಹ್ಯೂಗೋ ಚ್ವೆಜ್ ಮತ್ತು ನಿಕೋಲಸ್ ಮಡುರೊ ಅವರ ಆಡಳಿತದ ವಿಮರ್ಶಕರಾಗಿದ್ದರು.
- ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ನೊಬೆಲ್ ಪ್ರಶಸ್ತಿಯ ಇತಿಹಾಸ
- ನೊಬೆಲ್ ಪ್ರಶಸ್ತಿ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ, ಮಾನವರಿಗೆ ಪ್ರಯೋಜನಕಾರಿಯ ಕೆಲಸ ಮಾಡಿದವರಿಗೆ ನೀಡಲಾಗುತ್ತದೆ.
- ಪ್ರತಿ ವರ್ಷ ಡಿಸೆಂಬರ್ 10 ರಂದು ಪ್ರಶಸ್ತಿಗಳನ್ನು ನೀಡಲಾಗುತ್ತದೆ.
- ನೊಬೆಲ್ ಫೌಂಡೇಶನ್ 1900 ಜೂನ್ 29 ರಂದು ಸ್ಥಾಪನೆಯಾಯಿತು.
- ಆಲ್ಫ್ರೆಡ್ ನೊಬೆಲ್ ಅವರ ಸಂಪತ್ತು 2024 ರ ವೇಳೆಗೆ ಸುಮಾರು ₹2,300 ಕೋಟಿ ತಲುಪಿದೆ.