back to top
25.8 C
Bengaluru
Saturday, August 30, 2025
HomeKarnatakaBelagavi"ಕಾಂಗ್ರೆಸ್ ಕಾರ್ಯಕ್ರಮವಲ್ಲ, ದೇಶದ ಹಿತದ ಚಿಂತನೆ"– DCM D.K. Shivakumar

“ಕಾಂಗ್ರೆಸ್ ಕಾರ್ಯಕ್ರಮವಲ್ಲ, ದೇಶದ ಹಿತದ ಚಿಂತನೆ”– DCM D.K. Shivakumar

- Advertisement -
- Advertisement -

Belagavi: ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಸ್ಮರಿಸಲು ಹಾಗೂ ದೇಶದ ಮುಂದಿನ ದಿಕ್ಕು ಕುರಿತು ಚರ್ಚಿಸಲು ನಾವು ಈ ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM D.K. Shivakumar) ಹೇಳಿದರು. “ಈ ಕಾರ್ಯಕ್ರಮ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಲ್ಲ; ಇದು ಎಲ್ಲರ ಕಾರ್ಯಕ್ರಮ,” ಎಂದು ಹೇಳಿದರು.

ಕಾರ್ಯಕ್ರಮ ವಿವರಗಳು

ಡಿ. 26:

  • ಬೆಳಗ್ಗೆ 10:00: ವೀರಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ.
  • ಬೆಳಗ್ಗೆ 10:45: ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ.
  • ಬೆಳಗ್ಗೆ 11:15: ಗಂಗಾಧರ ದೇಶಪಾಂಡೆ ಸ್ಮಾರಕ ಅನಾವರಣ.
  • ಮಧ್ಯಾಹ್ನ 3:00: ಕಾರ್ಯಕಾರಿ ಸಮಿತಿ ಸಭೆ.
  • ರಾತ್ರಿ 7:00: ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ.

ಡಿ. 27:

  • ಬೆಳಗ್ಗೆ 10:30: ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆಯ ಅನಾವರಣ. ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಹಾಗೂ ವಿವಿಧ ನಾಯಕರು ಭಾಗವಹಿಸಲಿದ್ದಾರೆ.
  • ಮಧ್ಯಾಹ್ನ 12:00: ಸಿಎಂ ನೇತೃತ್ವದಲ್ಲಿ ಔತಣಕೂಟ.
  • ಮಧ್ಯಾಹ್ನ 1:00: ಸಾರ್ವಜನಿಕ ಸಮಾವೇಶ.

ಜಗದೀಶ ಶೆಟ್ಟರ್ ಅವರ “ಗಾಂಧಿ ಪ್ರತಿಮೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ” ಎಂಬ ಆರೋಪಕ್ಕೆ ಪ್ರತಿಯಾಗಿ ಡಿಸಿಎಂ ಶಿವಕುಮಾರ್ ಹೇಳಿದರು: ” ಅವರ ಮನೆವರೆಗೂ ರತ್ನಗಂಬಳಿ ಹಾಕಿಸೋಣ. ನನ್ನ ಸಮ್ಮುಖದಲ್ಲೇ ಮುಖ್ಯಮಂತ್ರಿಗಳು ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಆರ್.ಅಶೋಕ್, ನಾರಾಯಣಸ್ವಾಮಿ, ಸಭಾಪತಿಗಳಿಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸೇರಿಸಿದ್ದೇವೆ ಎಂದು ಹೇಳಿದರು.”

“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ಈ ರೀತಿಯ ಕಾರ್ಯಕ್ರಮ ನಡೆಸಲು ಮುಂದಾಗಬೇಕು. ನಾವು ಈ ಕಾರ್ಯಕ್ರಮವನ್ನು ಒಂದು ವರ್ಷ ಪೂರ್ತಿಯಾಗಿ ಆಚರಿಸುತ್ತೇವೆ,” ಎಂದು ಅವರು ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page