Home News ಏಕದಿನ Rankings: ಬುಮ್ರಾಗೆ ಸ್ಥಾನವಿಲ್ಲ

ಏಕದಿನ Rankings: ಬುಮ್ರಾಗೆ ಸ್ಥಾನವಿಲ್ಲ

15
Jasprit Bumrah

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಹೊಸ ಏಕದಿನ ಶ್ರೇಯಾಂಕ ಪ್ರಕಟಿಸಿದೆ. ಭಾರತದ ಮೂವರು ಬ್ಯಾಟ್ಸ್‌ಮನ್ ಗಳು ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.

  • ಶುಭ್ಮನ್ ಗಿಲ್ – 784 ಅಂಕ, 1ನೇ ಸ್ಥಾನ
  • ರೋಹಿತ್ ಶರ್ಮಾ – 756 ಅಂಕ, 2ನೇ ಸ್ಥಾನ
  • ವಿರಾಟ್ ಕೊಹ್ಲಿ – 736 ಅಂಕ, 4ನೇ ಸ್ಥಾನ

ಭಾರತವು 5 ತಿಂಗಳಿಂದ ಯಾವುದೇ ಏಕದಿನ ಪಂದ್ಯವನ್ನಾಡದಿದ್ದರೂ, ಈ ಮೂವರು ಆಟಗಾರರು ಅಗ್ರ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಟಿ20 ಫಾರ್ಮ್ಯಾಟ್‌ನಿಂದ ನಿವೃತ್ತರಾಗಿದ್ದಾರೆ. ಅವರು ಕೊನೆಯದಾಗಿ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ರೋಹಿತ್ 76 ರನ್‌ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾ ಸೋತರೂ, ಮೂರು ಆಟಗಾರರು ಶತಕ ಬಾರಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

  • ಟ್ರಾವಿಸ್ ಹೆಡ್ – 142 ರನ್, 11ನೇ ಸ್ಥಾನಕ್ಕೆ ಏರಿಕೆ
  • ಮಿಚೆಲ್ ಮಾರ್ಷ್ – 100 ರನ್, 44ನೇ ಸ್ಥಾನಕ್ಕೆ ಏರಿಕೆ
  • ಕ್ಯಾಮರೂನ್ ಗ್ರೀನ್ – 118* ರನ್, 78ನೇ ಸ್ಥಾನಕ್ಕೆ ಏರಿಕೆ

ಟಾಪ್ 10 ಬ್ಯಾಟ್ಸ್‌ಮನ್ ‌ಗಳ ಪಟ್ಟಿ

  • ಶುಭ್ಮನ್ ಗಿಲ್ (ಭಾರತ) – 784 ಅಂಕ
  • ರೋಹಿತ್ ಶರ್ಮಾ (ಭಾರತ) – 756 ಅಂಕ
  • ಬಾಬರ್ ಅಜಮ್ (ಪಾಕಿಸ್ತಾನ) – 739 ಅಂಕ
  • ವಿರಾಟ್ ಕೊಹ್ಲಿ (ಭಾರತ) – 736 ಅಂಕ
  • ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) – 720 ಅಂಕ
  • ಚರಿತ್ ಅಸಲಂಕಾ (ಶ್ರೀಲಂಕಾ) – 719 ಅಂಕ
  • ಹ್ಯಾರಿ ಟೆಕ್ಟರ್ (ಐರ್ಲೆಂಡ್) – 708 ಅಂಕ
  • ಶ್ರೇಯಸ್ ಅಯ್ಯರ್ (ಭಾರತ) – 704 ಅಂಕ
  • ಶೈ ಹೋಪ್ (ವೆಸ್ಟ್ ಇಂಡೀಸ್) – 699 ಅಂಕ
  • ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ) – 676 ಅಂಕ

ಬೌಲಿಂಗ್ ಶ್ರೇಯಾಂಕ

  • ಕುಲದೀಪ್ ಯಾದವ್ (ಭಾರತ) – 650 ಅಂಕ, 3ನೇ ಸ್ಥಾನ
  • ರವೀಂದ್ರ ಜಡೇಜಾ (ಭಾರತ) – 616 ಅಂಕ, 9ನೇ ಸ್ಥಾನ
  • ಕೇಶವ್ ಮಹಾರಾಜ್ (ದ. ಆಫ್ರಿಕಾ) – 671 ಅಂಕ, 1ನೇ ಸ್ಥಾನ
  • ಮಹಿಷ ತೀಕ್ಷನ್ (ಶ್ರೀಲಂಕಾ) – 662 ಅಂಕ, 2ನೇ ಸ್ಥಾನ

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಟಾಪ್ 100 ಬೌಲರ್‌ಗಳ ಪಟ್ಟಿಯಲ್ಲೇ ಇಲ್ಲ. 2023ರ ಏಕದಿನ ವಿಶ್ವಕಪ್ ನಂತರ ಅವರು ಇನ್ನೂ ಒಂದೇ ಒಂದು ಏಕದಿನ ಪಂದ್ಯವನ್ನೂ ಆಡಿಲ್ಲ.

ಆ ಕಾರಣದಿಂದ ಅವರು ಏಕದಿನ ಶ್ರೇಯಾಂಕದಲ್ಲಿ ಸ್ಥಾನ ಪಡೆಯಲಿಲ್ಲ. ಆದರೆ ಟೆಸ್ಟ್ ಶ್ರೇಯಾಂಕದಲ್ಲಿ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page