back to top
25.2 C
Bengaluru
Wednesday, October 8, 2025
HomeKarnatakaನೆಲಮಂಗಲದಲ್ಲಿ Oil Warehouse ಗೆ ಬೆಂಕಿ – ಕೋಟ್ಯಂತರ ನಷ್ಟ

ನೆಲಮಂಗಲದಲ್ಲಿ Oil Warehouse ಗೆ ಬೆಂಕಿ – ಕೋಟ್ಯಂತರ ನಷ್ಟ

- Advertisement -
- Advertisement -

Nelamangala: ಅಡಕಿಮಾರನಹಳ್ಳಿ ಗ್ರಾಮದಲ್ಲಿ ಇರುವ ಆಯಿಲ್ ಗೋದಾಮಿನಲ್ಲಿ (Oil warehouse) ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಭಾರೀ ಅವಘಡ ಸಂಭವಿಸಿದೆ. ಈ ಗೋದಾಮು ಕೃಷ್ಣಪ್ಪ ಎಂಬುವವರಿಗೆ ಸೇರಿದ್ದು, ಸುಮಾರು 33 ಸಾವಿರ ಚದರ ಅಡಿ ವಿಸ್ತೀರ್ಣವಿದೆ. ಬೆಂಕಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆಯಿಲ್ ಉತ್ಪನ್ನಗಳು ಸುಟ್ಟು ಭಸ್ಮವಾಗಿವೆ.

ಬೆಂಕಿಯ ಹೊಗೆ ಹಾಗೂ ಜ್ವಾಲೆಗಳು 10 ಕಿಮೀ ದೂರದವರೆಗೂ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭೀತಿಯನ್ನುಂಟುಮಾಡಿದೆ. ಬೆಂಕಿ ನಂದಿಸಲು ನೆಲಮಂಗಲ, ಪೀಣ್ಯ, ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಹಾಗೂ ಯಶವಂತಪುರದಿಂದ ಸುಮಾರು 60 ರಿಂದ 70 ಅಗ್ನಿಶಾಮಕ ಸಿಬ್ಬಂದಿ ಭಾಗಿಯಾಗಿ ಶ್ರಮಿಸುತ್ತಿದ್ದಾರೆ.

ಶೆಲ್ ಕಂಪನಿಗೆ ಸೇರಿದ ಆಯಿಲ್ ಉತ್ಪನ್ನಗಳನ್ನು ಈ ಗೋದಾಮಿನಲ್ಲಿ ಸಂಗ್ರಹಿಸಲಾಗಿದ್ದು, ಬೆಂಕಿಯನ್ನು ನಂದಿಸಲು ಹೆಚ್ಚಿನ ಬದ್ಧತೆ ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ನಂದಿಸಲು ನಸುಕಿನ 3 ಗಂಟೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದೆ.

ಸುದ್ದಿ ತಿಳಿದ ತಕ್ಷಣ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗದಿರುವುದು ಸಮಾಧಾನಕರ ಸಂಗತಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page