ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟವು ಒಂದು ರಾಷ್ಟ್ರ, ಒಂದು ಚಂದಾದಾರಿಕೆ (One Nation One Subscription) ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳನ್ನು ಒದಗಿಸಲಿದೆ. ಇದರ ಅಂದಾಜು ವೆಚ್ಚ ₹6,000 ಕೋಟಿ ಆಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಶ್ವಾದ್ಯಾಂತ ಸಂಶೋಧನಾ ಪ್ರಬಂಧಗಳು ಮತ್ತು ಜರ್ನಲ್‌ಗಳಿಗೆ ಸುಲಭವಾಗಿ ಪ್ರವೇಶಿಸಬಹುದು.
ಈ ಯೋಜನೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ. ‘ಒಂದು ರಾಷ್ಟ್ರ ಒಂದು ಚಂದಾದಾರಿಕೆ’ ಯೋಜನೆಯಲ್ಲಿ 30 ಪ್ರಮುಖ ಅಂತಾರಾಷ್ಟ್ರೀಯ ಜರ್ನಲ್ ಪ್ರಕಾಶಕರು ಸೇರಿದ್ದಾರೆ. ಇವು ಸುಮಾರು 13,000 ಇ- ಜರ್ನಲ್‌ಗಳನ್ನು 6,300 ಕ್ಕೂ ಹೆಚ್ಚು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು R&D ಸಂಸ್ಥೆಗಳು ಬಳಸಬಹುದು.
ವಿದ್ಯಾರ್ಥಿಗಳು ಈಗ ಸಂಶೋಧನಾ ಪ್ರಬಂಧಗಳು ಮತ್ತು ಜರ್ನಲ್‌ಗಳನ್ನು ಹುಡುಕಲು ಪ್ರಪಂಚದಾದ್ಯಂತ ಅಲೆದಾಡಬೇಕಾಗುವುದಿಲ್ಲ. ಬದಲಿಗೆ, ಅವುಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು.
ಇನ್ನು ಮುಂದೆ, ಅಟಲ್ ಇನ್ನೋವೇಶನ್ ಮಿಷನ್ (Atal Innovation Mission) ಹೊಸ ಹಂತವನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿ, 30 ಹೊಸ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳಲ್ಲಿ ಯಾವುದೇ ಭಾಷೆಯ ನಿರ್ಬಂಧವಿಲ್ಲ, ಹಾಗಾಗಿ ದೇಶದಾದ್ಯಂತದ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲಿಯೂ ಕೆಲಸ ಮಾಡಬಹುದು.
ಈ ಕಾರ್ಯಕ್ರಮಕ್ಕೆ 2,750 ಕೋಟಿ ರೂ. ವೆಚ್ಚವಾಗಲಿದೆ ಮತ್ತು ಜಮ್ಮು-ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸುಮಾರು 1,000 ಹೊಸ ಇನ್ನೋವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.