back to top
23.9 C
Bengaluru
Wednesday, July 30, 2025
HomeNewsLaser Dazzler ಹೊಂದಿರುವ Optonic Shield: ಭಾರತದ ಹೊಸ ರಕ್ಷಣಾ ತಂತ್ರಜ್ಞಾನ

Laser Dazzler ಹೊಂದಿರುವ Optonic Shield: ಭಾರತದ ಹೊಸ ರಕ್ಷಣಾ ತಂತ್ರಜ್ಞಾನ

- Advertisement -
- Advertisement -

New Delhi: ಇಂದಿನ ಯುದ್ಧ ತಂತ್ರದಲ್ಲಿ ದೂರದಿಂದ ಬರುವ ದಾಳಿಗಳ ಪ್ರಬಲ ಭೀತಿ ಇದೆ. ಕ್ಷಿಪಣಿಗಳು, ಡ್ರೋನ್‌ಗಳು, ಮತ್ತು ಸ್ಟೀಲ್ತ್ ವಿಮಾನಗಳಿಂದ ಯಾವುದೇ ಸ್ಥಳವನ್ನು ಹೊಡೆಯಬಹುದು. ಈ ಹಿನ್ನಲೆಯಲ್ಲಿ ಭಾರತ ತನ್ನ ಮುಖ್ಯ ಆಸ್ತಿಗಳು ಮತ್ತು ಪ್ರಮುಖ ಸ್ಥಳಗಳನ್ನು ರಕ್ಷಿಸಲು ಹೊಸ ತಂತ್ರಜ್ಞಾನವನ್ನು (Defense Technology) ಅಭಿವೃದ್ಧಿಪಡಿಸುತ್ತಿದೆ.

ಆಪ್ಟಾನಿಕ್ ಶೀಲ್ಡ್ ಎಂದರೇನು? ಇದು ಲೇಸರ್ ಡ್ಯಾಜ್ಲರ್‌ಗಳನ್ನು ಹೊಂದಿರುವ ಹೊಸ ರಕ್ಷಣಾ ವ್ಯವಸ್ಥೆ. DRDO ಇದನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರಿಂದ ಮಿಲಿಟರಿ ನೆಲೆಗಳು, ಐತಿಹಾಸಿಕ ಕಟ್ಟಡಗಳು ಮತ್ತು ಅಣೆಕಟ್ಟುಗಳಂತಹ ಪ್ರಮುಖ ಪ್ರದೇಶಗಳನ್ನು ರಕ್ಷಿಸಬಹುದು.

ಡ್ರೋನ್, ಕ್ಷಿಪಣಿ ಮತ್ತು ಇತರ ಹವಾಯ್ದಾಳಿಗಳಿಗೆ ತಡೆಯಾಗಿ ಆಪ್ಟಾನಿಕ್ ಶೀಲ್ಡ್ ಕೆಲಸ ಮಾಡುತ್ತದೆ. ಇದು ಗುರಿಗಳನ್ನು ನಿಖರವಾಗಿ ಗುರುತಿಸಿ ತಕ್ಷಣ ಪ್ರತಿಕ್ರಿಯಿಸಲು ಎಐ ಸಹಾಯದ ಸಾಫ್ಟ್‌ವೇರ್ ಹೊಂದಿರುತ್ತದೆ.

ಈ ಶೀಲ್ಡ್‌ನಲ್ಲಿ ಎಲೆಕ್ಟ್ರೋ-ಆಪ್ಟಿಕಲ್ ತಂತ್ರಜ್ಞಾನ ಬಳಕೆಯಾಗಿದ್ದು, ದಿನದಿಂದ ರಾತ್ರಿ ತನಕ ಗುರಿಗಳನ್ನು ಸ್ಪಷ್ಟವಾಗಿ ಪತ್ತೆಹಚ್ಚಬಹುದು. ಲೇಸರ್ ಡ್ಯಾಜ್ಲರ್‌ಗಳ ಮೂಲಕ ದಾಳಿ ವಸ್ತುಗಳ ದಿಕ್ಕು ಮತ್ತು ಗತಿಯನ್ನೂ ಟ್ರ್ಯಾಕ್ ಮಾಡಬಹುದು.

ಇದು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾಗುತ್ತಿರುವ ರಕ್ಷಣಾ ವ್ಯವಸ್ಥೆಯಾಗಿದ್ದು, ಇತರ ರಾಷ್ಟ್ರಗಳ ಮೇಲೆ ಅವಲಂಬನೆ ಕಡಿಮೆ ಮಾಡುವತ್ತ ಮುಂದಾಗಿದೆ. ಭವಿಷ್ಯದಲ್ಲಿ ಅಮೆರಿಕಾ, ರಷ್ಯಾ, ಯುರೋಪ್ ನಂತಹ ರಾಷ್ಟ್ರಗಳಿಂದ ರಕ್ಷಣಾ ಸಾಧನಗಳ ಆಮದು ಅವಶ್ಯಕತೆ ಕಡಿಮೆಯಾಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page