ವಿಮಾನದಲ್ಲಿ (flight) ಒಂದು ಬಾರಿಯಾದರೂ ಹೋಗಬೇಕು. ಆ ಅನುಭವವನ್ನು ಸವಿಯಬೇಕು ಎನ್ನುವುದು ಎಲ್ಲರ ಕನಸು. ಇದೀಗ 15 ಜನ ಅನಾಥ (orphans) ಮಕ್ಕಳಿಗೆ ಮೊದಲ ಬಾರಿ ವಿಮಾನದಲ್ಲಿ ಹಾರಾಡುವ ಅವಕಾಶ ಸಿಕ್ಕಿದ್ದು, ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubblli)ಮನ ಮಿಡಿಯುವ ಘಟನೆ ನಡೆದಿದೆ. ಹುಬ್ಬಳ್ಳಿಯ ಅನಾಥ ಮಕ್ಕಳಲ್ಲಿ ಆತ್ಮಸ್ಥೆರ್ಯ ಹೆಚ್ಚಿಸುವ ಸಪ್ಪೋಂ ಕೀ ಉಡಾನ್ (Sapno Ki Udaan) ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗಿದೆ. ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.
ಕೇಂದ್ರ ಸರ್ಕಾರದ ಸಪ್ಪೋಂ ಕೀ ಉಡಾನ್ (Sapno Ki Udaan) ಕಾರ್ಯಕ್ರಮದಡಿ ನಗರದ ಸೇವಾ ಭಾರತಿ ಟ್ರಸ್ಟ್‌ನ (Seva Bharati Trust) ಅನಾಥ ಹಾಗೂ ನಿರ್ಗತಿಕ 15 ಜನ ಮಕ್ಕಳು ಹಾಗೂ ಇಬ್ಬರು ತಾಯಂದಿರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಮೊದಲ ಬಾರಿ ಪ್ರಯಾಣ ಬೆಳೆಸಿದ್ದಾರೆ.
ಈ ಮಕ್ಕಳು ಬೆಂಗಳೂರಿನ ನೆಹರು ಪ್ಲಾನೆಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ವಿಜ್ಞಾನ ವಿಷಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಸೇವಾ ಭಾರತಿಯಲ್ಲಿ ಆಶ್ರಯ ಪಡೆದು ಸುಂದರ ಬದುಕಿನ ಕನಸು ಕಾಣುತ್ತಿರುವ ಅನಾಥ ಮಕ್ಕಳಲ್ಲಿ ಈ ಬಾನಂಗಳ ಹಾರಾಟ ಹೊಸ ಚೈತನ್ಯ, ಹುಮ್ಮಸ್ಸು ಮೂಡಿಸಿದೆ.
ಕೇಂದ್ರ ಸರ್ಕಾರ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಭಾಗಿಯಾಗಿ ಸಂಭ್ರಮಿಸಿದ್ದಾರೆ.
ಬೆಂಗಳೂರಿನ ನೆಹರು ಪ್ಲಾನೆಟ್, ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್ ಸೇರಿ ಮತ್ತಿತರ ಪ್ರದೇಶಗಳಿಗೆ ಕೊಂಡೊಯ್ದು ವಿವಿಧ ರೀತಿಯ ತಿಳಿವಳಿಕೆ ನೀಡುವ ಈ ಕಾರ್ಯಕ್ರಮ ನಿಜಕ್ಕೂ ಅನಾಥ ಮಕ್ಕಳ ಬದುಕಿನಲ್ಲಿ ಆಶಾ ಭಾವನೆ ಮತ್ತಷ್ಟು ಹೆಚ್ಚಿಸಿದೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಬಿಜೆಪಿ ಅಧ್ಯಕ್ಷತಿಪ್ಪಣ್ಣ ಮಜ್ಜಗಿ, ಉದ್ಯಮಿ ಡಾ.ಎಸ್ ವಿ. ಪ್ರಸಾದ ಇದ್ದರು.
ಹುಬ್ಬಳ್ಳಿಯ ರೌಂಡ್ ಟೇಬಲ್-37ರ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಪಾಲಿಕೆ ಮಾಜಿ ಮೇಯರ್ ವೀರಣ್ಣ ಸವಡಿ ಹಾಗೂ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ನೆರವು ನೀಡಿದ್ದಾರೆ.
ರೌಂಡ್ ಟೇಬಲ್-37ರ ಅಧ್ಯಕ್ಷೆ ಡಾ. ಅಪೂರ್ವಾ ಪಾಟೀಲ ಹಾಗೂ ಡಾ. ವಿವೇಕ ಪಾಟೀಲ ನೇತೃತ್ವವಹಿಸಿದ್ದರು.