New Delhi : ಈ ವರ್ಷದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ದೇಶದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗಾಗಿ ಘೋಷಣೆ ಮಾಡಲಾಗಿದೆ. ಈ ಪೈಕಿ ಕರ್ನಾಟಕದ 9 ಗಣ್ಯರು ವಿಭಿನ್ನ ವಿಭಾಗಗಳಲ್ಲಿ ದೇಶದ ಗರಿಮೆಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಆಯೋಜನೆಗೊಂಡ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕರ್ನಾಟಕದಿಂದ ಪದ್ಮ ಪುರಸ್ಕೃತರು:
ಪದ್ಮವಿಭೂಷಣ: ಪ್ರಸಿದ್ಧ ವಯೊಲಿನ್ ವಾದಕ ಡಾ. ಲಕ್ಷ್ಮಿನಾರಾಯಣ ಸುಬ್ರಮಣಿಯಂ ಅವರಿಗೆ ಕಲಾ ಕ್ಷೇತ್ರದಲ್ಲಿ ನೀಡಲಾಯಿತು.
ಪದ್ಮಭೂಷಣ: ಹಿರಿಯ ನಟ ಅನಂತನಾಗ್ (ಚಿತ್ರರಂಗ) ಮತ್ತು ಹಿರಿಯ ಪತ್ರಿಕೋದ್ಯಮಿಗ ಎ. ಸೂರ್ಯಪ್ರಕಾಶ್ (ಸಾಹಿತ್ಯ, ಪತ್ರಿಕೋದ್ಯಮ).
ಪದ್ಮಶ್ರಿ:
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ (ತೊಗಲು ಬೊಂಬೆಯಾಟ)
ಹಾಸನ್‌ನ ರಘು (ಕಲಾ)
ಪ್ರಸಿದ್ಧ ಉದ್ಯಮಿ ಪ್ರಶಾಂತ್ ಪ್ರಕಾಶ್ (ವ್ಯಾಪಾರ ಮತ್ತು ಉದ್ಯಮ)
ಸಂಗೀತ ತಜ್ಞ ರಿಕಿ ಕೇಜ್ (ಕಲಾ)
ಜನಪದ ಗಾಯಕ ವೆಂಕಪ್ಪ ಅಂಭಾಜಿ ಸುಗತೇಕರ
ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ
ದೇಶಾದ್ಯಾಂತ ಪ್ರಶಸ್ತಿ ಪುರಸ್ಕೃತರು:
ಪದ್ಮವಿಭೂಷಣ:
ಎಂ.ಟಿ. ವಾಸುದೇವನ್ ನಾಯರ್ (ಚಿತ್ರನಿರ್ದೇಶಕ – ಮರಣೋತ್ತರ)
ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್
ಪದ್ಮಭೂಷಣ:
ಮಾಜಿ ಮುಖ್ಯಮಂತ್ರಿ ಮನೋಹರ ಜೋಶಿ (ಮರಣೋತ್ತರ)
ಗಝಲ್ ಗಾಯಕ ಪಂಕಜ್ ಉದಾಸ್ (ಮರಣೋತ್ತರ)
ತೆಲುಗಿನ ನಟ ನಂದಮೂರಿ ಬಾಲಕೃಷ್ಣ
ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್
ಪದ್ಮಶ್ರಿ:
ಕ್ರಿಕೆಟ್ ಆಟಗಾರ ಹಾಗೂ ಭಾರತ ತಂಡದ ಮಾಜಿ ಆಟಗಾರ ಆರ್. ಅಶ್ವಿನ್ ಸೇರಿದಂತೆ 113 ಸಾಧಕರು ಪದ್ಮಶ್ರಿಗೆ ಪಾತ್ರರಾದರು.
ಈ ಬಾರಿ ಒಟ್ಟು 139 ಜನರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳಲ್ಲಿ 7 ಜನರಿಗೆ ‘ಪದ್ಮವಿಭೂಷಣ’, 19 ಜನರಿಗೆ ‘ಪದ್ಮಭೂಷಣ’ ಮತ್ತು 113 ಜನರಿಗೆ ‘ಪದ್ಮಶ್ರಿ’ ಪ್ರಶಸ್ತಿ ಘೋಷಿಸಲಾಗಿದೆ.