Bengaluru: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ (Terror Attack) ದಾಳಿಯ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಚುರುಕುಗೊಳಿಸಿದೆ. ಈ ದಾಳಿಯಲ್ಲಿ ಸಾವಿಗೀಡಾದ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರ ಮನೆಗೆ NIA ಅಧಿಕಾರಿಗಳ ತಂಡ ಭೇಟಿ ನೀಡಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದೆ.
ನಾಲ್ವರು ಅಧಿಕಾರಿಗಳ ತಂಡವು ಭರತ್ ಭೂಷಣ್ ಪತ್ನಿ ಡಾ. ಸುಜಾತಾರನ್ನು ವಿಚಾರಣೆ ನಡೆಸಿದ್ದು, ದಾಳಿಯ ಸಂದರ್ಭದಲ್ಲಿ ತಾನು ನೋಡಿದ ಘಟನೆಗಳ ಬಗ್ಗೆ ವಿವರ ಕಲೆ ಹಾಕಲಾಗಿದೆ. ಶಂಕಿತ ಉಗ್ರರ ರೇಖಾಚಿತ್ರಗಳನ್ನು ತೋರಿಸಿ ಪತ್ತೆ ಹಚ್ಚಲು ಪ್ರಯತ್ನಿಸಲಾಗಿದೆ.
ವಿಚಾರಣೆ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳು
- ಕಾಶ್ಮೀರಕ್ಕೆ ನೀವು ಯಾವಾಗ ಹೋದಿರಿ? ಯಾರೆಲ್ಲಾ ಜೊತೆಗೆ ಇದ್ದರು?
- ದಾಳಿ ನಡೆದ ಸಮಯದಲ್ಲಿ ನೀವು ಎಲ್ಲಿದ್ದಿರಿ? ಭರತ್ ಭೂಷಣ್ ಎಲ್ಲಿದ್ದರು?
- ಉಗ್ರರು ಯಾವ ಭಾಷೆ ಮಾತನಾಡಿದರು? ಎಷ್ಟು ಮಂದಿ ಇದ್ದರು?
- ಉಗ್ರರ ಮುಖ ಚಹರೆ, ಉಡುಪು ನೆನಪಿದೆಯೆ?
- ಉಗ್ರರ ಸ್ಕೆಚ್‌ಗಳನ್ನು ನೋಡಿ ಏನಾದರೂ ಗುರುತಿಸಿದ್ದೀರಾ?
- ಅವರು ಬಳಸಿದ ಆಯುಧಗಳ ಬಗ್ಗೆ ನಿಮಗೆ ಏನಾದರೂ ಮಾಹಿತಿಯಿದೆಯೆ?
ಸುಜಾತಾ ಅವರಿಂದ ಮಹತ್ವದ ಮಾಹಿತಿಯನ್ನು ಪಡೆದ ಅಧಿಕಾರಿಗಳು, ದಾಳಿಯಲ್ಲಿ ಸಾವಿಗೀಡಾದ ಇತರರ ಮನೆಗೂ ಭೇಟಿ ನೀಡುತ್ತಿದ್ದಾರೆ. ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಪಲ್ಲವಿ ಅವರಿಂದ ಕೂಡ ಎನ್ಐಎ ಮಾಹಿತಿ ಸಂಗ್ರಹಿಸಲು ಸಿದ್ಧವಾಗಿದೆ.
ಪಹಲ್ಗಾಮ್‌ನಲ್ಲಿ ಕಳೆದ ವಾರ ನಡೆದ ಈ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ದೇಶದಾದ್ಯಂತ ದುಃಖ ವ್ಯಾಪಿಸಿದೆ. ಮೃತರಲ್ಲಿ 25 ಮಂದಿ ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ವ್ಯಕ್ತಿ ಸೇರಿದ್ದಾರೆ. ಈ ದಾಳಿಯಲ್ಲಿ ಕರ್ನಾಟಕದ ಭರತ್ ಭೂಷಣ್ ಮತ್ತು ಮಂಜುನಾಥ್ ಸಹ ಹುತಾತ್ಮರಾಗಿದ್ದಾರೆ.
For Daily Updates WhatsApp ‘HI’ to 7406303366
ಇದೇ ರೀತಿಯಲ್ಲಿ ಮತ್ತಷ್ಟು ಶಂಕಿತ ವಿವರಗಳನ್ನು ತಿಳಿದುಕೊಳ್ಳಲು ಎನ್ಐಎ ತನಿಖೆ ಮುಂದುವರಿಯುತ್ತಿದೆ.