Islamabad: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಸಂಘರ್ಷಗಳು ನಡೆದವು. ಈ ಸಂಘರ್ಷಗಳಲ್ಲಿ ಎರಡೂ ಕಡೆ ಹಲವರು ಜೀವಗಳನ್ನು ಬಲಿ ಪಡೆದ ನಂತರ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ.
ಪಾಕಿಸ್ತಾನ ಸರ್ಕಾರವು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದೊಂದಿಗೆ ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಕದನ ವಿರಾಮ ಘೋಷಿಸಿದೆ. ಡಾನ್ ಪತ್ರಿಕೆ ವಿದೇಶಾಂಗ ಕಚೇರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
“ತಾಲಿಬಾನ್ ಕೋರಿಕೆಯ ಮೇರೆಗೆ ಎರಡೂ ಪಕ್ಷಗಳ ಒಪ್ಪಿಗೆಯೊಂದಿಗೆ ತಾತ್ಕಾಲಿಕ ಕದನ ವಿರಾಮ ನಿರ್ಧರಿಸಲಾಗಿದೆ.” ಆದರೆ, ಅಫ್ಘಾನ್ ಸರ್ಕಾರ ಈ ಕುರಿತಂತೆ ತಕ್ಷಣದ ಯಾವುದೇ ದೃಢೀಕರಣ ನೀಡಿಲ್ಲ.
ಪಾಕಿಸ್ತಾನ ಸಶಸ್ತ್ರ ಪಡೆಗಳು ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಕದನ ವಿರಾಮ ಘೋಷಿಸಲಾಯಿತು. ಸ್ಪಿನ್ ಬೋಲ್ಡಕ್ ಜಿಲ್ಲೆ ಸೇರಿದಂತೆ ಗಡಿಯ ಸಮೀಪದ ವಸತಿ ಪ್ರದೇಶಗಳಿಗೆ ಈ ದಾಳಿಗಳು ನಡೆದವು.
ಆಫ್ಘಾನ್ ಅಧಿಕಾರಿಗಳ ಪ್ರಕಾರ, 15 ನಾಗರಿಕರು ಸಾವನ್ನಪ್ಪಿದ್ದಾರೆ, ಮಹಿಳೆ ಮತ್ತು ಮಕ್ಕಳನ್ನೂ ಸೇರಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.







