back to top
20.8 C
Bengaluru
Thursday, October 30, 2025
HomeNewsChampions Trophy ಯಿಂದ PCB ಗೆ ಭಾರೀ ನಷ್ಟ!

Champions Trophy ಯಿಂದ PCB ಗೆ ಭಾರೀ ನಷ್ಟ!

- Advertisement -
- Advertisement -

2025ರ ಚಾಂಪಿಯನ್ಸ್ ಟ್ರೋಫಿ (Champions Trophy) ಆಯೋಜನೆಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB-Pakistan Cricket Board) ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕ್ರೀಡಾಂಗಣ ನವೀಕರಣ ವೆಚ್ಚ ಹೆಚ್ಚಳ ಮತ್ತು ಕಡಿಮೆ ಆದಾಯದಿಂದಾಗಿ ಪಿಸಿಬಿ 700 ಕೋಟಿ ರೂ. ನಷ್ಟ ಅನುಭವಿಸಿದೆ.

ಟೂರ್ನಿಗೆ ಮುನ್ನ, ಪಿಸಿಬಿ ₹500 ಕೋಟಿ ವೆಚ್ಚದಲ್ಲಿ ಮೂರು ಕ್ರೀಡಾಂಗಣಗಳನ್ನು ನವೀಕರಿಸಿತ್ತು. ಆದರೆ, ನವೀಕರಣದ ವೆಚ್ಚ ನಿರೀಕ್ಷಿತ ಬಜೆಟ್ ಗಿಂತ ಶೇ.50ರಷ್ಟು ಹೆಚ್ಚಾಗಿತ್ತು. ಟೂರ್ನಿಯ ಸಿದ್ಧತೆಗಾಗಿ ಹೆಚ್ಚುವರಿಯಾಗಿ ₹340 ಕೋಟಿ ವೆಚ್ಚ ಮಾಡಲಾಗಿತ್ತು, ಒಟ್ಟಾರೆ ₹869 ಕೋಟಿಯಷ್ಟು ಖರ್ಚು ಮಾಡಲಾಗಿದೆ. ಆದರೆ, ಪಾಕಿಸ್ತಾನ ಟಿಕೆಟ್ ಹಾಗೂ ಇನ್ನಿತರ ಮೂಲಗಳಿಂದ ಕೇವಲ ₹52 ಕೋಟಿ ರೂ. ಮಾತ್ರ ಗಳಿಸಿತು, ಇದರಿಂದ ಶೇ.85ರಷ್ಟು ನಷ್ಟವನ್ನು ಅನುಭವಿಸಿತು.

ಈ ಆರ್ಥಿಕ ಕಷ್ಟದ ಪರಿಣಾಮವಾಗಿ, ಪಾಕ್ ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ನ ಪಂದ್ಯ ಶುಲ್ಕವನ್ನು ಶೇ.90ರಷ್ಟು, ಮೀಸಲು ಆಟಗಾರರ ಪಾವತಿಯನ್ನು ಶೇ.87.5ರಷ್ಟು ಕಡಿತಗೊಳಿಸಲು ಪಿಸಿಬಿ ನಿರ್ಧರಿಸಿದೆ. ಹಾಗೆಯೇ, ಆಟಗಾರರಿಗೆ ನೀಡುತ್ತಿದ್ದ ಫೈವ್ ಸ್ಟಾರ್ ವಸತಿ ಸೌಲಭ್ಯಗಳನ್ನು ಕಡಿತಗೊಳಿಸಿ ಎಕಾನಮಿ ಹೋಟೆಲ್‌ಗಳಿಗೆ ಬದಲಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page