back to top
20.1 C
Bengaluru
Tuesday, October 28, 2025
HomeSportsCricketPakistan ಟೀಮ್‌ 13 ಪಂದ್ಯಗಳ ಹೀನಾಯ ಸೋಲು

Pakistan ಟೀಮ್‌ 13 ಪಂದ್ಯಗಳ ಹೀನಾಯ ಸೋಲು

- Advertisement -
- Advertisement -

Pakistan: ಪಾಕಿಸ್ತಾನ್ ತಂಡ (Pakistan team) 2024 ರಲ್ಲಿ ಅತ್ಯಧಿಕ T20 ಪಂದ್ಯಗಳಲ್ಲಿ ಸೋತ ತಂಡ ಎಂಬ ಹೀನಾಯ ಶ್ರೇಯಸ್ಸು ಪಡೆದುಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ T20 ಸರಣಿಯನ್ನು ಪಾಕಿಸ್ತಾನ 3-0 ಅಂತರದಲ್ಲಿ ಸೋತು ವೈಟ್‌ವಾಶ್ ಅನುಭವಿಸಿದೆ.

ಪಾಕಿಸ್ತಾನ್‌ ಒಟ್ಟು 22 T20 ಪಂದ್ಯಗಳಲ್ಲಿ ಆಡಿದ್ದು, ಕೇವಲ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. 13 ಪಂದ್ಯಗಳಲ್ಲಿ ಸೋಲನುಭವಿಸಿದ್ದು, 2 ಪಂದ್ಯಗಳು ರದ್ದಾಗಿವೆ. ಈ ಸೋಲಿನೊಂದಿಗೆ ಪಾಕ್‌ ಈ ವರ್ಷ T20 ಫಾರ್ಮಾಟ್‌ನಲ್ಲಿ ಅತ್ಯಧಿಕ ಸೋಲುಗಳನ್ನು ಕಂಡ ಪೂರ್ಣ ಸದಸ್ಯ ತಂಡವಾಗಿದೆ.

ಭಾರತ ಈ ವರ್ಷ 26 ಪಂದ್ಯಗಳಲ್ಲಿ ಆಡಿದ್ದು, 24 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಕೇವಲ 2 ಸೋಲುಗಳು (ಝಿಂಬಾಬ್ವೆ ಮತ್ತು ಸೌತ್ ಆಫ್ರಿಕಾ ವಿರುದ್ಧ). ಟಿ20 ವಿಶ್ವಕಪ್‌ನಲ್ಲಿ ಭಾರತ ಸೋಲಿಲ್ಲದ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಾಯಕತ್ವ ಬದಲಾವಣೆ ಮತ್ತು ಸತತ ವೈಫಲ್ಯ ಪಾಕಿಸ್ತಾನ ತಂಡವನ್ನು ಹಿನ್ನಡೆಯಲ್ಲಿ ಕೊಂಡೊಯ್ದಿದೆ. ಮೊಹಮ್ಮದ್ ರಿಝ್ವಾನ್ ನೇತೃತ್ವದಲ್ಲಿ ಕಣಕ್ಕಿಳಿದ ಪಾಕ್, ಆಸ್ಟ್ರೇಲಿಯಾದಲ್ಲಿ ವೈಟ್‌ವಾಶ್‌ಗೆ ಗುರಿಯಾಗಿದೆ.

2024ರಲ್ಲಿ ಇಂಡೋನೇಷ್ಯಾ 15 ಸೋಲುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಪಾಕ್‌ ಎರಡನೇ ಸ್ಥಾನದಲ್ಲಿದೆ. ಮುಂದಿನ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನ ಮತ್ತಷ್ಟು ಸೋತರೆ, ಹೀನಾಯ ದಾಖಲೆಯನ್ನು ಬರೆದಂತೆ.

ಪಾಕಿಸ್ತಾನ ತಂಡ T20 ಕ್ರಿಕೆಟ್‌ನಲ್ಲಿ ಸೋಲುಗಳನ್ನು ಬಿಟ್ಟುಕೊಡುತ್ತಿರುವಾಗ, ಭಾರತ ವಿಜಯಗಾಥೆ ಬರೆದಿದೆ. ಪಾಕ್‌ಗೆ ಸ್ಥಿರತೆಯ leadership ಮತ್ತು ಶ್ರೇಷ್ಠ ಪ್ರದರ್ಶನ ಅತೀ ಅಗತ್ಯವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page