ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ (Basit Ali) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರ ಮಾತಿನ ಪ್ರಕಾರ, ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ್ (India-Pakistan) ನಡುವಿನ ಪಂದ್ಯವೇ ನಡೆಯಬಾರದು.
ಟೀಮ್ ಇಂಡಿಯಾ ಪಾಕಿಸ್ತಾನ್ ತಂಡವನ್ನು ದೊಡ್ಡ ಅಂತರದಲ್ಲಿ ಸೋಲಿಸಬಹುದು. ಹೀಗಾಗಿ “ಅವಮಾನಕರ ಸೋಲಿನಿಂದ ತಪ್ಪಿಸಿಕೊಳ್ಳಲು ಪಂದ್ಯವೇ ಆಗಬಾರದು” ಎಂದು ಬಾಸಿತ್ ಅಲಿ ಹೇಳಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ್, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲು ಕಂಡಿತ್ತು. ಅಂತಿಮ ಪಂದ್ಯದಲ್ಲಿ ಕೇವಲ 92 ರನ್ಗಳಿಗೆ ಆಲೌಟ್ ಆದ ಹಿನ್ನೆಲೆ, ತಂಡದ ಸ್ಥಿತಿಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಾಸಿತ್ ಅಲಿ ಹೇಳುವಂತೆ, “ಭಾರತ ನಮ್ಮ ವಿರುದ್ಧ ಆಡಿದರೆ ಖಂಡಿತ ಸೋಲಿಸುತ್ತಾರೆ. ಆ ಸೋಲು ತುಂಬಾ ಅವಮಾನಕರವಾಗಬಹುದು. ಆದ್ದರಿಂದ ಟೀಮ್ ಇಂಡಿಯಾ ಪಂದ್ಯ ಆಡದೇ ಇದ್ದರೆ ಪಾಕಿಸ್ತಾನಕ್ಕೆ ಒಳ್ಳೆಯದು.”
2025ರ ಏಷ್ಯಾಕಪ್ ಸೆಪ್ಟೆಂಬರ್ 9ರಿಂದ ಆರಂಭವಾಗಲಿದೆ. ಸೆಪ್ಟೆಂಬರ್ 14ರಂದು ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಸೂಪರ್-4 ಮತ್ತು ಫೈನಲ್ ಹಂತದಲ್ಲಿಯೂ ಮತ್ತೆ ಎದುರಾಗುವ ಸಾಧ್ಯತೆ ಇದೆ.