ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಈಗ ಮತ್ತೆ ಬಿಸಿಸಿಐಗೆ (BCCI) ಸವಾಲು ಹಾಕಿದೆ. ಐಪಿಎಲ್ (IPL) ವಿರುದ್ಧ ಪೈಪೋಟಿ ನೀಡುವ ಉದ್ದೇಶದಿಂದ ಪಾಕಿಸ್ತಾನ ಸೂಪರ್ ಲೀಗ್ (PSL-Pakistan Super League) ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಟೂರ್ನಿ ಐಪಿಎಲ್ ನಡುವೆ ಆರಂಭಗೊಳ್ಳಲಿದ್ದು, ಪಿಸಿಬಿ ಈ ಮೂಲಕ ಬಿಸಿಸಿಐಗೆ ತೀವ್ರ ಪೈಪೋಟಿ ನೀಡಲು ಮುಂದಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ 2025ರ ಆರಂಭಿಕ ಪಂದ್ಯ ಎಪ್ರಿಲ್ 11 ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಲಾಹೋರ್ ಖಲಂದರ್ ಎದುರಿಸಲಿದ್ದಾರೆ. 34 ಪಂದ್ಯಗಳ ಈ ಟೂರ್ನಿಯ ಫೈನಲ್ ಮೇ 18 ರಂದು ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯಗಳ ವೀಕ್ಷಣಾ ಸ್ಥಳಗಳು
- ರಾವಲ್ಪಿಂಡಿ – 11 ಪಂದ್ಯಗಳು
- ಲಾಹೋರ್ – 13 ಪಂದ್ಯಗಳು (ಎಲಿಮಿನೇಟರ್ ಮತ್ತು ಫೈನಲ್ ಸೇರಿ)
- ಕರಾಚಿ ಮತ್ತು ಮುಲ್ತಾನ್ – ತಲಾ 5 ಪಂದ್ಯಗಳು
ಈ ಬಾರಿ ಪಿಎಸ್ಎಲ್ ಮತ್ತು ಐಪಿಎಲ್ ಒಂದೇ ಸಮಯದಲ್ಲಿ ನಡೆಯಲಿದ್ದು, ಪಿಎಸ್ಎಲ್‌ಗೆ ಅಂತರಾಷ್ಟ್ರೀಯ ಸ್ಟಾರ್ ಆಟಗಾರರ ಲಭ್ಯತೆ ಕುಸಿಯಬಹುದು. ಜೊತೆಗೆ, ಟಿವಿ ವೀಕ್ಷಕರ ಸಂಖ್ಯೆಯಲ್ಲೂ ಇಳಿಮುಖವಾಗಬಹುದು. ಈ ಸ್ಪರ್ಧೆ ಕ್ರಿಕೆಟ್ ಪ್ರೇಮಿಗಳಿಗೆ ಕುತೂಹಲ ಮೂಡಿಸಿದೆ.