ಪಾಕಿಸ್ತಾನವು ಬಾಂಗ್ಲಾದೇಶ (Bangladesh) ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಮಾಜಿ ನಾಯಕ ಬಾಬರ್ ಆಝಂ ಹಾಗೂ ಪ್ರಮುಖ ಆಟಗಾರ ಮೊಹಮ್ಮದ್ ರಿಝ್ವಾನ್ ಅವರನ್ನು ಹೊರಗಿಟ್ಟಿದೆ. ವೇಗಿ ಶಾಹೀನ್ ಅಫ್ರಿದಿಗೂ ತಂಡದಲ್ಲಿ ಸ್ಥಾನವಿಲ್ಲ.
ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಬಾರಿ ಯುವ ಆಟಗಾರರಿಗೆ ಅವಕಾಶ ನೀಡಿದೆ. ಹೊಸತಾಗಿ ಆಯ್ಕೆಗೊಂಡ ಈ ತಂಡಕ್ಕೆ ಸಲ್ಮಾನ್ ಅಲಿ ಅಘಾ ನಾಯಕತ್ವ ವಹಿಸಲಿದ್ದಾರೆ.
ತಂಡದ ಪ್ರಮುಖ ಆಟಗಾರರು
- ಬ್ಯಾಟ್ಸ್‌ಮನ್: ಫಖರ್ ಝಮಾನ್, ಸೈಮ್ ಅಯ್ಯೂಬ್, ಖುಷ್ದಿಲ್ ಶಾ
- ವಿಕೆಟ್ ಕೀಪರ್‌ಗಳು: ಮೊಹಮ್ಮದ್ ಹ್ಯಾರಿಸ್, ಸಾಹಿಬ್ಝಾದ ಫರ್ಹಾನ್
- ವೇಗಿ ಬೌಲರ್‌ಗಳು: ಅಬ್ಬಾಸ್ ಅಫ್ರಿದಿ, ಫಹೀಮ್ ಅಶ್ರಫ್
- ಸ್ಪಿನ್ನರ್: ಸುಫಿಯಾನ್ ಮುಖೀಮ್
ಪಾಕಿಸ್ತಾನ್ ಟಿ20 ತಂಡ (vs ಬಾಂಗ್ಲಾದೇಶ): ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಅಹ್ಮದ್ ದಾನಿಯಾಲ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಸೈಮ್ ಅಯ್ಯೂಬ್, ಸುಫಿಯಾನ್ ಮುಖೀಮ್, ಸಲ್ಮಾನ್ ಮಿರ್ಝ, ಸಾಹಿಬ್ಝಾದ ಫರ್ಹಾನ್
ಟಿ20 ಸರಣಿ ವೇಳಾಪಟ್ಟಿ (ಮಿರ್ಪುರ್)
- ಜುಲೈ 20 – ಮೊದಲ ಪಂದ್ಯ
- ಜುಲೈ 22 – ಎರಡನೇ ಪಂದ್ಯ
- ಜುಲೈ 24 – ಮೂರನೇ ಪಂದ್ಯ
ಎಲ್ಲಾ ಪಂದ್ಯಗಳು ಮಿರ್ಪುರ್ನ ಶೇರ್-ಎ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ.