
Karachi: ಪಾಕಿಸ್ತಾನದ (Pakistan) ಜಾಫರ್ ಎಕ್ಸ್‌ಪ್ರೆಸ್ ವಶಪಡಿಸಿಕೊಂಡಿರುವ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಮತ್ತು ಪಾಕಿಸ್ತಾನಿ ಸೇನೆಯೊಡನೆ ಯುದ್ಧ ಮುಂದುವರೆದಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ (BLA) ಗುರುವಾರ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ಹೇಳಿಕೆಯ ಮೂಲಕ, “ಕಾರ್ಯಾಚರಣೆ ಮುಗಿಯಿತು ಮತ್ತು ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆ” ಎಂದು ಪಾಕಿಸ್ತಾನ ಸರ್ಕಾರ ನೀಡಿದ್ದ ಮಾಹಿತಿ ತಪ್ಪು ಎಂದು ಉಗ್ರರು ತಿರುಗೇಟು ನೀಡಿದ್ದಾರೆ.
ಇದೇ ವೇಳೆ, ಪಾಕಿಸ್ತಾನಿ ಸೇನೆ ನೈತಿಕ ಸ್ಥೈರ್ಯ ಕಳೆದುಕೊಳ್ಳದಂತೆ ಸತ್ಯ ಸಾವಿನ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು BLA ಆರೋಪಿಸಿದೆ. ಪಾಕಿಸ್ತಾನ ಸರ್ಕಾರ ಮತ್ತು ಅದರ ಮಾಧ್ಯಮಗಳು ನೀಡುವ ವರದಿಗಳನ್ನು ನಂಬುವುದಕ್ಕಿಂತ ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಸ್ವತಂತ್ರ ತನಿಖೆ ನಡೆಸಬೇಕು ಎಂಬುದಾಗಿ ಉಗ್ರರು ಒತ್ತಾಯಿಸಿದ್ದಾರೆ.