back to top
21.5 C
Bengaluru
Wednesday, September 17, 2025
HomeBusinessPaytm: 2,000 ಕೋಟಿ ರೂಗೆ ತನ್ನ ಷೇರುಗಳನ್ನು ಮಾರಲಿರುವ ಚೀನಾದ Ant Group

Paytm: 2,000 ಕೋಟಿ ರೂಗೆ ತನ್ನ ಷೇರುಗಳನ್ನು ಮಾರಲಿರುವ ಚೀನಾದ Ant Group

- Advertisement -
- Advertisement -

New Delhi: ಚೀನಾದ ಆಲಿಬಾಬಾ ಗ್ರೂಪ್​​ಗೆ ಸೇರಿದ ಆ್ಯಂಟ್ ಗ್ರೂಪ್ ಸಂಸ್ಥೆ (Ant Group) ಪೇಟಿಎಂನಲ್ಲಿ (Paytm) ಹೊಂದಿರುವ ಕೆಲವು ಷೇರುಗಳನ್ನು ಮಾರಲಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಯ ಪ್ರಕಾರ, ಆ್ಯಂಟ್ ಗ್ರೂಪ್ Paytm ನಲ್ಲಿ ಶೇ. 4.1 ರಷ್ಟು ಷೇರುಗಳನ್ನು ಮಾರಲಿದೆ. ಪ್ರತೀ ಷೇರಿಗೆ 809.75 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಲಿ Paytm ಷೇರು ಬೆಲೆ ಸುಮಾರು 850 ರೂ ಅವರಲ್ಲಿ fluctuating ಆಗಿದೆ.

Paytm ನಲ್ಲಿ ಆ್ಯಂಟ್ ಗ್ರೂಪ್ ಸದ್ಯದಲ್ಲಿ ಶೇ. 9.85 ರಷ್ಟು ಷೇರು ಪಾಲನ್ನು ಹೊಂದಿದೆ. 2023ರ ಆಗಸ್ಟ್‌ನಲ್ಲಿ, ಆ್ಯಂಟ್ ಗ್ರೂಪ್ Paytmನ founder ವಿಜಯ್ ಶೇಖರ್ ಶರ್ಮಾ ಅವರಿಗೆ ಶೇ. 10.3 ರಷ್ಟು ಷೇರುಗಳನ್ನು ಮಾರಿತ್ತು. ಇನ್ನು, ಈ ಮಾರಾಟದ ನಂತರ, Paytm ನಲ್ಲಿ ಶರ್ಮಾ ಅವರ ಹಕ್ಕು 5.75% ರಷ್ಟು ಉಳಿದಿದೆ.

Paytm ಪ್ರಮುಖ ಷೇರುದಾರರು

  • ಸೇಫ್ ಅಡ್ವೈಸರ್ಸ್ ಲಿ: ಶೇ. 15.36
  • ರೆಸಿಲಿಯೆಂಟ್ ಅಸೆಟ್ ಮ್ಯಾನೇಜ್ಮೆಂಟ್: ಶೇ. 10.25
  • ಆ್ಯಂಟ್ಫಿನ್ ಹೋಲ್ಡಿಂಗ್: ಶೇ. 9.848
  • ವಿಜಯ್ ಶೇಖರ್ ಶರ್ಮಾ: ಶೇ. 9.071
  • ಶರ್ಮಾ ಕುಟುಂಬ: ಶೇ. 4.857

ವಿಜಯ್ ಶೇಖರ್ ಶರ್ಮಾ ಮತ್ತು ಅವರ ಕುಟುಂಬದವರು ಒಟ್ಟು ಶೇ. 14 ರಷ್ಟು ಷೇರುಗಳನ್ನು ಹೊಂದಿದ್ದಾರೆ.

ಪೇಟಿಎಂ ಇತ್ತೀಚೆಗೆ ತ್ರೈಮಾಸಿಕ ವರದಿಯಲ್ಲಿ ನಷ್ಟವನ್ನು ಕಡಿಮೆ ಮಾಡಿದೆ. 540 ಕೋಟಿ ರೂ ನಷ್ಟವನ್ನು ತೋರಿಸಿದೆ, ಆದರೆ ಹಿಂದೆ 550 ಕೋಟಿ ರೂ ನಷ್ಟವಿತ್ತು. ಆದಾಯ ಇಳಿಕೆಯನ್ನು ನಿಯಂತ್ರಿಸಲು Paytm ಯಶಸ್ವಿವಾಗಿರಲಿಲ್ಲ. 2025ರ ಮಾರ್ಚ್ ಕ್ವಾರ್ಟರ್‌ನ ಅಂತ್ಯದ ವೇಳೆಗೆ 1,912 ಕೋಟಿ ರೂ ಆದಾಯ ದಾಖಲಾಗಿದ್ದು, ಹಿಂದಿನ ವರ್ಷದ ಅದೇ ಸಮಯದಲ್ಲಿ 2,267 ಕೋಟಿ ರೂ ಆದಾಯ ಆಗಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page