18ನೇ ಆವೃತ್ತಿಯ IPL ಪಂದ್ಯಗಳು ಯಾವುದೇ ಅಡೆತಡೆ ಇಲ್ಲದೆ ಸಾಗುತ್ತಿದ್ದು, ಕ್ರಿಕೆಟ್ ಪ್ರಿಯರು ರಣರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
BCCI ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂಬೈ ಟಿ20 ಲೀಗ್ ನಲ್ಲಿ ಪಾಲ್ಗೊಂಡಿರುವ ಸೋಬೋ ಸೂಪರ್ಸಾನಿಕ್ಸ್ ಫ್ರಾಂಚೈಸಿಯ ಮಾಜಿ ಸಹ ಮಾಲೀಕ ಗುರ್ಮೀತ್ ಸಿಂಗ್ ಮೇಲೆ ಜೀವಮಾನ ನಿಷೇಧ ಹೇರಲು ಆದೇಶ ನೀಡಲಾಗಿದೆ.
BCCI, ಕ್ರಿಕೇಟ್ನ ಫಿಕ್ಸಿಂಗ್ನ್ನು ಕಡಿಮೆ ಮಾಡಲು ಮಹತ್ವದ ಕ್ರಮವಾಗಿ ಗುರ್ಮೀತ್ ಸಿಂಗ್ (Gurmeet Singh) ವಿರುದ್ಧ ಶಾಶ್ವತ ಬ್ಯಾನ್ ಹೇರಿದೆ. ಗುರ್ಮೀತ್, ಬಿಸಿಸಿಐ ಆಯೋಜಿಸುವ ಯಾವುದೇ ಟೂರ್ನಿಯಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿದೆ.
2019ರ ಮುಂಬೈ ಟಿ20 ಲೀಗ್ ವೇಳೆ, ಗುರ್ಮೀತ್ ಸಿಂಗ್ ಫಿಕ್ಸಿಂಗ್ ಮಾಡಿ, ಸ್ಥಳೀಯ ಆಟಗಾರರಾದ ಧವಲ್ ಕುಲಕರ್ಣಿ ಮತ್ತು ಭವಿನ್ ಠಾಕೂರ್ ಅವರನ್ನು ಸಂಪರ್ಕಿಸಿದ್ದಾಗಿ ಆರೋಪಿಸಲಾಗಿದೆ. ಬಿಸಿಸಿಐ ದೀರ್ಘ ಕಾಲ ತನಿಖೆ ನಡೆಸಿದ ನಂತರ, ಈ ಆರೋಪ ನಿಜವೆಂದು ಸಾಬೀತಾಯಿತು. ಆದ್ದರಿಂದ, ಶಾಶ್ವತ ಬ್ಯಾನ್ ಹೇರಲು ನಿರ್ಧಾರ ತೆಗೆದುಕೊಳ್ಳಲಾಗಿದೆ.