Home Entertainment Thug Life ಚಿತ್ರ ಪ್ರದರ್ಶನ ತಡೆಯದಂತೆ High Court ನಲ್ಲಿ ಅರ್ಜಿ

Thug Life ಚಿತ್ರ ಪ್ರದರ್ಶನ ತಡೆಯದಂತೆ High Court ನಲ್ಲಿ ಅರ್ಜಿ

Kamal Haasan

ಬೆಂಗಳೂರು: ನಟ ಕಮಲ್ ಹಾಸನ್ ಅವರು “ಕನ್ನಡ ಭಾಷೆ ತಮಿಳಿನಿಂದ ಉದ್ಭವವಾಗಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಕರ್ನಾಟಕದಲ್ಲಿ ಅವರ ಹೊಸ ಚಿತ್ರ ‘ಥಗ್ ಲೈಫ್’ಕ್ಕೆ (Thug Life) ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಚಿತ್ರ ನಿರ್ಮಾಣ ಸಂಸ್ಥೆ ರಾಜ್‌ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಹೈಕೋರ್ಟ್ ಮೆಟ್ಟಿಲೇರಿದೆ.

ಈ ಸಂಸ್ಥೆಯು ಕಮಲ್ ಹಾಸನ್ ಅವರ ಮಾಲಿಕತ್ವದಲ್ಲಿದೆ ಮತ್ತು ಸಂಸ್ಥೆಯ ಸಿಇಒ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಜೂನ್ 5ರಂದು ಬಿಡುಗಡೆಯಾಗಲಿರುವ ಈ ಚಿತ್ರ ಪ್ರದರ್ಶನವನ್ನು ತಡೆಯಬಾರದು ಎಂಬುದಾಗಿ ಅವರು ಹೈಕೋರ್ಟ್‌ ಬಳಿ ಮನವಿ ಮಾಡಿದ್ದಾರೆ.

ಅರ್ಜಿಯಲ್ಲಿ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚಲನಚಿತ್ರ ಮಂಡಳಿಗೆ ಚಿತ್ರ ಪ್ರದರ್ಶನ ತಡೆಯದಂತೆ ಸೂಚನೆ ನೀಡಬೇಕು ಎಂಬ ಆಗ್ರಹವಿದೆ. ಜೊತೆಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರು ಚಿತ್ರ ಪ್ರದರ್ಶನದ ವೇಳೆಗೆ ಸರಿಯಾದ ಭದ್ರತೆ ಒದಗಿಸಬೇಕು ಎಂಬ ಬೇಡಿಕೆಯನ್ನು ಅವರು ಮಂಡಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version