back to top
26.8 C
Bengaluru
Friday, August 1, 2025
HomeBusinessPM e-Drive Scheme: ದೇಶಾದ್ಯಂತ EV Charging Network ನಿರ್ಮಾಣಕ್ಕೆ 2000 ಕೋಟಿ ರೂ. ಹೂಡಿಕೆ

PM e-Drive Scheme: ದೇಶಾದ್ಯಂತ EV Charging Network ನಿರ್ಮಾಣಕ್ಕೆ 2000 ಕೋಟಿ ರೂ. ಹೂಡಿಕೆ

- Advertisement -
- Advertisement -

Hyderabad: ಪರಿಸರ ಹಸುರಾಗಿಸಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದೆ. ಅದರ ಭಾಗವಾಗಿ, ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ‘ಪಿಎಂ ಇ-ಡ್ರೈವ್’ ಯೋಜನೆಯನ್ನು (PM e-Drive Scheme) ಕೈಗೊಂಡಿದೆ. ಈ ಯೋಜನೆಯಡಿ ದೇಶದ ಹಲವು ಭಾಗಗಳಲ್ಲಿ ಸುಮಾರು 72,000 ಇವಿ (ಎಲೆಕ್ಟ್ರಿಕ್ ವಾಹನ) ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲು 2000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.

ಭಾರೀ ಕೈಗಾರಿಕೆ ಇಲಾಖೆ ಹೇಳಿಕೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳು, ಮೆಟ್ರೋ ನಗರಗಳು, ಟೋಲ್ ಪ್ಲಾಜಾಗಳು, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಇಂಧನ ಬಂಕ್ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಈ ಚಾರ್ಜಿಂಗ್ ಸ್ಟೇಷನ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ದೇಶದ ಇಂಧನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ವಚ್ಛ ಮತ್ತು ಸುಲಭವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದೇ ಇದರ ಗುರಿಯಾಗಿದೆ. ಭಾರಿ ಕೈಗಾರಿಕೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಕೇಂದ್ರ ಸಚಿವರು ಕುಮಾರಸ್ವಾಮಿ ಹೇಳಿದ್ದಾರೆ, ಪಿಎಂ ಇ-ಡ್ರೈವ್ ಯೋಜನೆ ಭಾರತವನ್ನು ಜಾಗತಿಕವಾಗಿ ಸುಸ್ಥಿರ ಸಾರಿಗೆ ಮಾದರಿಯಾಗಿಸಲು ಸಹಾಯಮಾಡುತ್ತದೆ. ಈ ಯೋಜನೆ ಕೇವಲ ಮೂಲಸೌಕರ್ಯ ನಿರ್ಮಾಣವಲ್ಲ, ಅದು ಶಕ್ತಿ ಭದ್ರತೆ ಮತ್ತು ಹಸಿರು ಆರ್ಥಿಕತೆಗೆ ಪಾದಾರ್ಪಣೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಈ ಯೋಜನೆಯ ಭಾಗವಾಗಿ ಡಿಜಿಟಲ್ ಸೂಪರ್ ಆ್ಯಪ್ ನಿರ್ಮಿಸಿದೆ. ಈ ಆ್ಯಪ್ ಮೂಲಕ ಇವಿ ಬಳಕೆದಾರರು ನೈಜ ಸಮಯದಲ್ಲಿ ಬುಕ್ಕಿಂಗ್, ಪಾವತಿ, ಚಾರ್ಜಿಂಗ್ ಲಭ್ಯತೆ ಮತ್ತು ಸ್ಟೇಷನ್ ಮಾಹಿತಿ ಪಡೆಯಬಹುದು. BHEL ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರದಿಂದ ಚಾರ್ಜರ್ ಉತ್ಪಾದನೆ ಮತ್ತು ಅಳವಡಿಕೆಯನ್ನು ನಿರ್ವಹಿಸುತ್ತದೆ.

ಶುದ್ಧ ಇಂಧನ ಪರಿವರ್ತನೆ ಯಶಸ್ವಿಯಾಗಲು ಸರ್ಕಾರ, ಸಾರ್ವಜನಿಕ ವಲಯ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪಿಎಂ ಇ-ಡ್ರೈವ್ ಹೊಸ ಹಸಿರು ಉದ್ಯೋಗ ಸೃಷ್ಟಿಸುವುದರ ಜೊತೆಗೆ, ಎಲ್ಲರಿಗೂ ಉತ್ತಮ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯ ನೀಡಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page