
ರೈತರ ಬೆಳೆಗಳಿಗೆ ವಿಮಾ ರಕ್ಷಣೆ ನೀಡುವ ಪಿಎಂ ಫಸಲ್ ಬಿಮಾ ಯೋಜನೆ (PM Fasal Bima Yojana) ಅಡಿ, ಕೇಂದ್ರ ಸರ್ಕಾರವು ರೈತರ ವಿಮಾ ಕ್ಲೇಮ್‌ಗಳಿಗೆ ಪರಿಹಾರವಾಗಿ 3,200 ಕೋಟಿ ರೂ ಬಿಡುಗಡೆ ಮಾಡಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಸ್ಥಾನದ ಝುಂಝುನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 30 ಲಕ್ಷ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ.
- ಅಧಿಕೃತ ಮಾಹಿತಿಯಂತೆ
- ಮಧ್ಯಪ್ರದೇಶ ರೈತರಿಗೆ ₹1,156 ಕೋಟಿ
- ರಾಜಸ್ಥಾನ ರೈತರಿಗೆ ₹1,121 ಕೋಟಿ
- ಇತರೆ ರಾಜ್ಯಗಳಿಗೆ ₹923 ಕೋಟಿ
ಈ ಯೋಜನೆಯಲ್ಲಿ ಈಗ ಹೊಸ ಮಾದರಿ ಕ್ಲೇಮ್ ಸೆಟಲ್ಮೆಂಟ್ ಸಿಸ್ಟಂ ರೂಪಿಸಲಾಗಿದೆ. ಇದರಿಂದ ಬೆಳೆ ನಷ್ಟಕ್ಕೆ ಬೇಗ ಪರಿಹಾರ ಸಿಗಲಿದೆ.
- ಸಬ್ಸಿಡಿ ನೀಡಲು ವಿಳಂಬ ಮಾಡಿದರೆ ರಾಜ್ಯ ಸರ್ಕಾರಗಳಿಗೆ 12% ದಂಡ
- ಕ್ಲೇಮ್ ಸೆಟಲ್ ಮಾಡಲು ವಿಳಂಬ ಮಾಡಿದರೆ ಇನ್ಷೂರೆನ್ಸ್ ಕಂಪನಿಗಳಿಗೆ 12% ಪೆನಾಲ್ಟಿ
- ಪಿಎಂ ಫಸಲ್ ಬಿಮಾ ಯೋಜನೆ: 2016ರಲ್ಲಿ ಪ್ರಾರಂಭವಾದ ಈ ಯೋಜನೆ ರೈತರಿಗೆ ಬೆಳೆ ವಿಮೆ ಪಡೆಯಲು ಅವಕಾಶ ನೀಡುತ್ತದೆ.
- ಪ್ರೀಮಿಯಂ ಕಡಿಮೆ, ಸಬ್ಸಿಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ
- ಪ್ರಕೃತಿ ವಿಕೋಪ, ಕೆಟ್ಟ ಹವಾಮಾನದಿಂದ ಬೆಳೆ ಹಾನಿಯಾದರೆ ವಿಮಾ ಹಣಕ್ಕೆ ಕ್ಲೇಮ್ ಸಲ್ಲಿಸಬಹುದು
- ಅಧಿಕಾರಿಗಳು ಜಮೀನು ಪರಿಶೀಲಿಸಿ ಹಾನಿ ಅಂದಾಜು ಮಾಡಿ ಹಣ ನಿಗದಿ ಮಾಡುತ್ತಾರೆ