Home News PM KISAN: ಅಕ್ಟೋಬರ್ 5 ರಂದು 18ನೇ ಕಂತು ಬಿಡುಗಡೆ

PM KISAN: ಅಕ್ಟೋಬರ್ 5 ರಂದು 18ನೇ ಕಂತು ಬಿಡುಗಡೆ

113
PM KISAN 18th Instalment Release on October 5th

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 18 ನೇ ಕಂತು ಅಕ್ಟೋಬರ್ 5, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಇದುವರೆಗೆ 17 ಕಂತುಗಳನ್ನು ವಿತರಿಸಲಾಗಿದೆ, ಕೊನೆಯದನ್ನು ಜೂನ್ 18 ರಂದು ಬಿಡುಗಡೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ, ಸರ್ಕಾರವು ನೋಂದಾಯಿತ ರೈತರಿಗೆ ವಾರ್ಷಿಕ 6,000 ರೂ.ಗಳನ್ನು ತಲಾ ರೂ 2,000 ರಂತೆ ಮೂರು ಕಂತುಗಳಲ್ಲಿ ನೀಡುತ್ತದೆ.

ಯೋಜನೆಗೆ ಅರ್ಹತೆಯ ಮಾನದಂಡ

ಎರಡು ಹೆಕ್ಟೇರ್ ಅಥವಾ ಐದು ಎಕರೆ ಜಮೀನು ಹೊಂದಿರುವ ರೈತರು ಯೋಜನೆಗೆ ಅರ್ಹರು. ಆದರೆ, ಸರ್ಕಾರಿ ನೌಕರರು, ವೈದ್ಯರು ಮತ್ತು ವಕೀಲರಂತಹ ವೃತ್ತಿಪರರು, ಶಾಸಕರು ಮತ್ತು ಸಂಸದರಂತಹ ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಕುಟುಂಬಗಳು ಅರ್ಹರಲ್ಲ.

ಪ್ರಸ್ತುತ, ಸುಮಾರು 10 ಕೋಟಿ ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.

PM-KISAN ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿಸುವುದು ಹೇಗೆ

ರೈತರು ಪಿಎಂ ಕಿಸಾನ್ ಯೋಜನೆಗೆ Offline ಮತ್ತು Onlineನಲ್ಲಿ ನೋಂದಾಯಿಸಿಕೊಳ್ಳಬಹುದು. ಆಫ್‌ಲೈನ್ ನೋಂದಣಿಗಾಗಿ, ಆಧಾರ್ ಕಾರ್ಡ್, ವೋಟರ್ ಐಡಿ, ಪಹಣಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

ಆನ್‌ಲೈನ್‌ನಲ್ಲಿ ನೋಂದಾಯಿಸಲು, pmkisan.gov.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು “New Farmer Registration” ಅಡಿಯಲ್ಲಿ ಹಂತಗಳನ್ನು ಅನುಸರಿಸಿ.

ನೀವು PM-KISAN ಫಲಾನುಭವಿಗಳ ಪಟ್ಟಿಯಲ್ಲಿದ್ದರೆ ಹೇಗೆ ಪರಿಶೀಲಿಸುವುದು

ನೀವು ಈಗಾಗಲೇ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿದ್ದರೆ ಆದರೆ ಕಂತು ಸ್ವೀಕರಿಸದಿದ್ದರೆ, ನೀವು ಆನ್‌ಲೈನ್‌ನಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ನಿಮ್ಮ ವಿವರಗಳನ್ನು ಪರಿಶೀಲಿಸಲು PM ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಿ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page