ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಂಪದ ಯೋಜನೆ (PMKSY-PM Kisan Sampada Yojana)ಗೆ 15ನೇ ಹಣಕಾಸು ಆಯೋಗದ ಅಡಿಯಲ್ಲಿ 6,520 ಕೋಟಿ ರೂ. ಪ್ಯಾಕೇಜ್ ಅನುಮೋದಿಸಲಾಗಿದೆ. ಇದರಲ್ಲೇ ಹೆಚ್ಚುವರಿಯಾಗಿ 1,920 ಕೋಟಿ ರೂ. ನೀಡಲಾಗಿದೆ.
ಯೋಜನೆಗಳ ಪ್ರಗತಿ
- 2025ರ ಜೂನ್ ವರೆಗೆ ಒಟ್ಟು 1,601 ಪ್ರಾಜೆಕ್ಟ್‌ಗಳು ಅನುಮೋದನೆಗೊಂಡಿವೆ.
- ಇವುಗಳಲ್ಲಿ 1,133 ಪ್ರಾಜೆಕ್ಟ್‌ಗಳು ಪೂರ್ಣಗೊಂಡಿವೆ.
- ವರ್ಷಕ್ಕೆ 255.66 ಲಕ್ಷ ಮೆಟ್ರಿಕ್ ಟನ್ ಆಹಾರ ಸಂಸ್ಕರಣೆ ಸಾಮರ್ಥ್ಯ ನಿರ್ಮಾಣವಾಗಿದೆ.
- ಎಲ್ಲಾ ಯೋಜನೆಗಳು ಪೂರ್ಣಗೊಂಡರೆ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭ ಹಾಗೂ 7 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
- ಒಟ್ಟು ₹21,803.19 ಕೋಟಿ ಹೂಡಿಕೆ ಸಾಧ್ಯತೆ ಇದೆ.
ಹಿಂದಿನ ಅನುದಾನ ಮತ್ತು ಹೊಸ ಉದ್ದೇಶಗಳು
- ಈ ಯೋಜನೆ 2017ರಲ್ಲಿ ಆರಂಭವಾಗಿದ್ದು, ಪ್ರಾರಂಭದಲ್ಲಿ ₹6,000 ಕೋಟಿ ರೂ. ಮೀಸಲಿಟ್ಟು ₹31,400 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿತ್ತು.
- ಈ ಬಾರಿ ಹೆಚ್ಚುವರಿಯಾಗಿ ನೀಡಿರುವ 1,920 ಕೋಟಿ ರೂ.ಯಲ್ಲಿ,
- ₹1,000 ಕೋಟಿ – 50 ಮಲ್ಟಿ-ಪ್ರಾಡಕ್ಟ್ ಫುಡ್ ಇರೇಡಿಯೇಶನ್ ಯುನಿಟ್‌ಗಳು ಹಾಗೂ 100 ಆಹಾರ ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ.
- ₹920 ಕೋಟಿ – ಈಗಾಗಲೇ ನಡೆಯುತ್ತಿರುವ ವಿವಿಧ ಕಾರ್ಯಗಳಿಗೆ.
ಯೋಜನೆಯ ಉದ್ದೇಶ
- ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಆಧುನಿಕ ಸೌಕರ್ಯ ನಿರ್ಮಾಣ.
- ರೈತರ ಉತ್ಪನ್ನಗಳನ್ನು ತೋಟದಿಂದ ಅಂಗಡಿಯವರೆಗೆ ತಲುಪಿಸುವ ಸರಬರಾಜು ಸರಪಳಿಯನ್ನು ಬಲಪಡಿಸುವುದು.
- ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವುದು ಹಾಗೂ ಉತ್ಪನ್ನ ವ್ಯರ್ಥವಾಗುವ ಪ್ರಮಾಣ ಕಡಿಮೆಗೊಳಿಸುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುವುದು.
- ಸಂಸ್ಕರಿತ ಆಹಾರ ವಸ್ತುಗಳ ರಫ್ತಿನ ಬೇಡಿಕೆಯನ್ನು ಪೂರೈಸುವುದು.