ಫ್ರಾನ್ಸ್ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯು ಭಾರತಕ್ಕೆ ಮಹತ್ವದ್ದಾಗಿದ್ದು, ವ್ಯಾಪಾರ, ಭದ್ರತೆ, ರಕ್ಷಣಾ ಸಹಕಾರ ಮತ್ತು ವೀಸಾ ನೀತಿ ಮುಂತಾದ ವಿಷಯಗಳ ಬಗ್ಗೆ ಚರ್ಚೆಯ ಸಾಧ್ಯತೆ ಇದೆ.
ಇದು ಮೋದಿ ಅವರ ಹತ್ತನೇ ಅಮೆರಿಕ ಪ್ರವಾಸವಾಗಿದೆ. 2014 ರಿಂದ ಅವರು ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಅವರನ್ನು ಭೇಟಿಯಾಗಿದ್ದಾರೆ. ಈಗ ಟ್ರಂಪ್ ಪುನಃ ಅಧ್ಯಕ್ಷರಾದ ನಂತರ ಶ್ವೇತಭವನದಲ್ಲಿ ಮಹತ್ವದ ಸಭೆ ನಡೆಯಲಿದೆ.
ಮುಖ್ಯ ಚರ್ಚಾ ವಿಷಯಗಳು
- ಅಕ್ರಮ ವಲಸೆ: ಅಮೆರಿಕದಿಂದ ಭಾರತೀಯ ಅಕ್ರಮ ವಲಸಿಗರನ್ನು ಹಿಂದಿರುಗಿಸುವ ಪ್ರಕ್ರಿಯೆ ಕುರಿತು ಚರ್ಚೆ.
- ಆಮದು ಸುಂಕ: ಟ್ರಂಪ್ ಆಡಳಿತದ ಸುಂಕ ನೀತಿಯ ಪರಿಣಾಮಗಳು ಮತ್ತು ಭಾರತಕ್ಕೆ ನೀಡಬಹುದಾದ ವಿನಾಯಿತಿಯ ಕುರಿತು ಮಾತುಕತೆ.
- ದ್ವಿಪಕ್ಷೀಯ ವ್ಯಾಪಾರ: ಭಾರತ-ಅಮೆರಿಕ ವ್ಯಾಪಾರ ಸಂಬಂಧ ಬಲಪಡಿಸುವ ಒಪ್ಪಂದಗಳ ನಿರೀಕ್ಷೆ.
- ರಕ್ಷಣಾ ಸಹಕಾರ: P-8I ಕಣ್ಗಾವಲು ವಿಮಾನಗಳ ಖರೀದಿ ಮತ್ತು ಇಂಡೋ-ಪೆಸಿಫಿಕ್ ಭಾಗದಲ್ಲಿ ಸಹಕಾರ.
- ವೀಸಾ ಮತ್ತು ವಲಸೆ ನೀತಿ: ಭಾರತೀಯ ಐಟಿ ವೃತ್ತಿಪರರಿಗೆ H-1B ವೀಸಾ ನೀತಿಯ ಸುಧಾರಣೆ.
- ಭಾರತ–ಪೂರ್ವ ಯುರೋಪ್ ಆರ್ಥಿಕ ಕಾರಿಡಾರ್: ಯುರೋಪ್ ಮತ್ತು ಏಷ್ಯಾ ನಡುವಿನ ವ್ಯಾಪಾರ ಸಂಪರ್ಕ ಹೆಚ್ಚಿಸುವ ಯೋಜನೆ.
ಈ ಭೇಟಿಯಿಂದ ಭಾರತ ಮತ್ತು ಅಮೆರಿಕ ನಡುವಿನ ಭದ್ರತೆ, ವ್ಯಾಪಾರ ಮತ್ತು ಆರ್ಥಿಕ ಸಹಕಾರ ಹೊಸ ಹಂತಕ್ಕೆ ಸಾಗುವ ನಿರೀಕ್ಷೆ ಇದೆ. ಮೋದಿ ಅವರ ‘ಟ್ರಂಪ್ ಕಾರ್ಡ್’ ಮತ್ತೊಮ್ಮೆ ಯಶಸ್ವಿಯಾಗುತ್ತದೆಯೇ ಎಂಬುದನ್ನು ಮುಂದಿನ ಬೆಳವಣಿಗೆಗಳು ನಿರ್ಧರಿಸಲಿವೆ.