ಪ್ರಧಾನಿ ನರೇಂದ್ರ ಮೋದಿ (PM Modi) ಭೋಪಾಲ್ ನಲ್ಲಿ ನಡೆದ ‘ಇನ್ವೆಸ್ಟ್ ಮಧ್ಯಪ್ರದೇಶ – ಜಾಗತಿಕ ಹೂಡಿಕೆದಾರರ ಶೃಂಗಸಭೆ-2025’ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದರು. ಅವರು ತಮ್ಮ ತಡವಾದ ಬಗ್ಗೆ ಕ್ಷಮೆ ಯಾಚಿಸಿ, ಅದಕ್ಕೆ ಕಾರಣವನ್ನು ವಿವರಿಸಿದರು.
ಭಾನುವಾರ ಭೋಪಾಲ್ ಬಂದ ಮೋದಿ, ಸೋಮವಾರ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಳು ನಡೆಯುತ್ತಿರುವುದು ಗಮನಕ್ಕೆ ತಂದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಮ್ಮ ಕಾರ್ಯಕ್ರಮದ ವೇಳಾಪಟ್ಟಿಯನ್ನು ಮರುನಿಗದಿ ಮಾಡಿದ್ದು, ಇದರಿಂದಾಗಿ ತಮ್ಮ ಆಗಮನ ವಿಳಂಬವಾಯಿತು ಎಂದು ತಿಳಿಸಿದರು.