
ಚೀನಾದ ಟಿಯಾಂಜಿನ್‌ನಲ್ಲಿ ನಡೆದ 25ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಪಹಲ್ಗಾಮ್ ಉಗ್ರ ದಾಳಿಯನ್ನು ಪಾಕಿಸ್ತಾನ ಹಾಜರಿರುವಾಗಲೇ ಖಂಡಿಸಿದರು.
- ಮೋದಿ ಹೇಳಿದರು,
- ಭಾರತ ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುತ್ತಿದೆ.
- ಇತ್ತೀಚಿನ ಪಹಲ್ಗಾಮ್ ದಾಳಿ ಮಾನವೀಯತೆಯ ಮೇಲಿನ ದಾಳಿ.
- ಭಯೋತ್ಪಾದನೆಗೆ ಯಾವುದೇ ದೇಶ ಬೆಂಬಲ ನೀಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಅವರು ಪರೋಕ್ಷವಾಗಿ ಪಾಕಿಸ್ತಾನವನ್ನು ಟೀಕಿಸಿ, “ಯಾವುದೇ ಬಣ್ಣದ, ಯಾವ ರೂಪದ ಭಯೋತ್ಪಾದನೆಯಾದರೂ ಎಲ್ಲ ರಾಷ್ಟ್ರಗಳು ಸೇರಿ ವಿರೋಧಿಸಬೇಕು” ಎಂದರು.
ಮೋದಿ ಭದ್ರತೆ, ಶಾಂತಿ ಮತ್ತು ಸ್ಥಿರತೆ ದೇಶದ ಅಭಿವೃದ್ಧಿಗೆ ಮುಖ್ಯ ಎಂದು ಹೇಳಿ, ಉಗ್ರವಾದದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.
ಅದೇ ಸಂದರ್ಭದಲ್ಲಿ, ಭಾರತವು ಭಯೋತ್ಪಾದನೆಗೆ ಹಣಕಾಸು ಒದಗಿಸುವವರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ನೆನಪಿಸಿದರು.
ಸಭೆಯ ಆರಂಭದಲ್ಲಿ, ಎಸ್ಸಿಒ ವೇದಿಕೆಯಲ್ಲಿ ಭಾರತವು S – Security (ಭದ್ರತೆ), C – Connectivity (ಸಂಪರ್ಕ), O – Opportunity (ಅವಕಾಶ) ಎಂಬ ಮೂರು ಸ್ತಂಭಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಮೋದಿ ವಿವರಿಸಿದರು.