New Delhi: ಸಂಸತ್ ಸದಸ್ಯರಿಗಾಗಿ 184 ಹೊಸ ಬಹುಮಹಡಿ ಫ್ಲಾಟ್‌ಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು (PM Modi). ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಈ ವಸತಿ ಸಮುಚ್ಚಯ ನಿರ್ಮಾಣಗೊಂಡಿದೆ.
ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು ಮನೋಹರ್ ಲಾಲ್ ಖಟ್ಟರ್ ಮತ್ತು ಕಿರಣ್ ರಿಜಿಜು ಉಪಸ್ಥಿತರಿದ್ದರು. ಮೋದಿ ಅವರು ಈ ಸಂದರ್ಭದಲ್ಲಿ ಸಿಂಧೂರ ಸಸಿಯನ್ನು ನೆಟ್ಟರು ಮತ್ತು ಕಟ್ಟಡ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.
ನಾಲ್ಕು ಟವರ್‌ಗಳಿಗೆ ಕೃಷ್ಣಾ, ಗೋದಾವರಿ, ಕೋಸಿ, ಹೂಗ್ಲಿ ಎಂಬ ನದಿಗಳ ಹೆಸರಿಡಲಾಗಿದೆ. ಪ್ರತಿಯೊಂದು ಫ್ಲಾಟ್ ಸುಮಾರು 5000 ಚದರ ಅಡಿ ವ್ಯಾಪ್ತಿಯಲ್ಲಿದ್ದು, ವಸತಿ ಮತ್ತು ಅಧಿಕೃತ ಕಾರ್ಯಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಂಸದರು ತಮ್ಮ ಸಾರ್ವಜನಿಕ ಕರ್ತವ್ಯಗಳನ್ನು ಮನೆಯಲ್ಲೇ ನಿರ್ವಹಿಸಬಹುದಾಗಿದೆ.
ಸಮುದಾಯ ಕೇಂದ್ರ, ಸಿಬ್ಬಂದಿ ವಸತಿ, ಕಚೇರಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಕಟ್ಟಡಗಳು ಭೂಕಂಪ ನಿರೋಧಕವಾಗಿದ್ದು, ಇತ್ತೀಚಿನ ಸುರಕ್ಷತಾ ಮಾನದಂಡಗಳಿಗೆ ತಕ್ಕಂತೆ ನಿರ್ಮಿಸಲಾಗಿದೆ. ಈ ಯೋಜನೆ ಪರಿಸರ ಸ್ನೇಹಿ 3 ಸ್ಟಾರ್ ರೇಟಿಂಗ್ ಹೊಂದಿದೆ.