Srinagar: ಜಮ್ಮು ಕಾಶ್ಮೀರದ (Jammu and Kashmir) ನಡೆದ Election ಸಭೆಯಲ್ಲಿ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ (Mallikarjuna Kharge) ಆರೋಗ್ಯ ಕುರಿತು ಪ್ರಧಾನಿ ಮೋದಿ (PM Modi) ಕರೆ ಮಾಡಿ ವಿಚಾರಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ(Jammu and Kashmir) ನಡೆಯಲಿರುವ ಮೂರನೇ ಹಂತದ ಮತದಾನಕ್ಕೆ ಭಾನುವಾರ ಪ್ರಚಾರ ಅಂತ್ಯಗೊಂಡಿತ್ತು, ಅಂದು ಸಭೆಯನ್ನುದ್ದೇಶಿಸಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ ಅಸ್ವಸ್ಥಗೊಂಡರು.
ನಂತರ ಸಹಾಯಕರ ನೆರವಿನೊಂದಿಗೆ ಚೇತರಿಸಿಕೊಂಡು ಮಾತು ಮುಂದುವರೆಸಿದ ಅವರು ‘‘ನನಗೆ ಈಗ 83 ವರ್ಷ, ಮೋದಿಯನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ’’ ಎಂದು ಹೇಳಿದರು.
ಈ ಕುರಿತು ಸಾಮಾಜಿಕ ಜಾಲತಾಣ (social networking site) ಎಕ್ಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ವಿಡಿಯೋ ಸದ್ಯ ಬಾರಿ ವೈರಲ್ ಆಗಿದೆ.ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಅಸ್ವಸ್ಥರಾದರು.ಬಳಿಕ ಸುಧಾರಿಸಿಕೊಂಡು ಮಾತನಾಡಲು ಶುರು ಮಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆ ಹೆಚ್ಚಾಗುತ್ತೆ ಎಂದು ಹೇಳಿದ್ದು, ಈ ಹೇಳಿಕೆ ಸದ್ಯ ವೈರಲ್ ಆಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆಯು ಬಾಯಿತಪ್ಪಿನಿಂದ ಬಂದದ್ದು ಅಥವಾ ಉದ್ದೇಶಪೂರ್ವಕವಾಗಿ ಹೇಳಿದ್ದಾರಾ ಎಂದು ಚರ್ಚೆಗಳು ನಡೆಯುತ್ತಿದೆ. ದೌರ್ಬಲ್ಯದ ಕ್ಷಣದಲ್ಲಿ ಸತ್ಯ ಹೊರಬರುತ್ತದೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದರೆ ಮತ್ತೆ ಕೆಲವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ.
Amit Shah ಪ್ರತಿಕ್ರಿಯೆ
ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ Amit Shah, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ “ಸಂಪೂರ್ಣವಾಗಿ ಅಸಹ್ಯಕರ ಮತ್ತು ಅವಮಾನಕರ” ಎಂದು ಬಣ್ಣಿಸಿದ್ದಾರೆ.
“ಹಗೆತನದ ಕಹಿ ಪ್ರದರ್ಶನ” ಎಂದು ಹೇಳಿಕೆಯನ್ನು ಬಣ್ಣಿಸಿರುವ ಅಮಿತ್ ಷಾ, Mallikarjun Kharge ಅವರು ಮೋದಿಯನ್ನು ಅಧಿಕಾರದಿಂದ ತೆಗೆದುಹಾಕಿದ ನಂತರವೇ ಸಾಯುತ್ತೇನೆ ಎಂದು ಹೇಳುವ ಮೂಲಕ ತಮ್ಮ ವೈಯಕ್ತಿಕ ಆರೋಗ್ಯದ ವಿಷಯಗಳಿಗೆ ಪ್ರಧಾನಿಯನ್ನು ಅನಗತ್ಯವಾಗಿ ಎಳೆದಿದ್ದಾರೆ ಎಂದು ದೂಷಿಸಿದ್ದಾರೆ .