Home India PM Modi ಅವರ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸ

PM Modi ಅವರ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸ

201
Prime Minister Narendra Modi has left for Paris

ಪ್ರಧಾನಿ ನರೇಂದ್ರ ಮೋದಿ (PM Modi) ಫ್ರಾನ್ಸ್‌ನ ಪ್ಯಾರಿಸಿನಲ್ಲಿ ನಡೆಯಲಿರುವ ಎಐ ಶೃಂಗಸಭೆ 2025ರಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಿದ್ದಾರೆ. ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.

ಫ್ರಾನ್ಸ್ ಭೇಟಿಯ ಮುಖ್ಯ ಅಂಶಗಳು

  • ಎಐ ಕ್ರಿಯಾ ಶೃಂಗಸಭೆ: ಜಾಗತಿಕ ತಜ್ಞರು ಮತ್ತು ನಾಯಕರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲಿದ್ದಾರೆ.
  • ಭಾರತೀಯ ದೂತಾವಾಸ ಉದ್ಘಾಟನೆ: ಮಾರ್ಸಿಲ್ಲೆಯಲ್ಲಿ ಭಾರತದ ಮೊದಲ ಕಾನ್ಸುಲೇಟ್ ಉದ್ಘಾಟನೆ.
  • ಅಂತಾರಾಷ್ಟ್ರೀಯ ಪ್ರಾಯೋಗಿಕ ರಿಯಾಕ್ಟರ್ ಯೋಜನೆ (ITER) ಪರಿಶೀಲನೆ.
  • ಭಾರತೀಯ ಯೋಧರಿಗೆ ಗೌರವ: 1ನೇ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಕೆ.

ಫ್ರಾನ್ಸ್ ಬಳಿಕ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಎಐ ಮಹತ್ವಾಕಾಂಕ್ಷೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್: ಚೀನಾದ ಒನ್ ಬೇಲ್ಟ್ ಒನ್ ರೋಡ್ ಯೋಜನೆಗೆ ಪ್ರತ್ಯಾಮ್ನವಾಗಿ ಈ ಯೋಜನೆ ರೂಪಿಸಲಾಗಿದೆ.

ಉಭಯ ದೇಶಗಳ ಸಂಬಂಧ ಬಲಪಡಿಸುವ ಮಾತುಕತೆ: ದ್ವಿಪಕ್ಷೀಯ ಸಂಬಂಧ ಹಾಗೂ ತೆರಿಗೆ ನೀತಿ ಕುರಿತು ಚರ್ಚೆ. ಮೋದಿ ಅವರ ಈ ಭೇಟಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page