back to top
26.6 C
Bengaluru
Tuesday, September 16, 2025
HomeKarnatakaBengaluru ನಲ್ಲಿ 17ಕ್ಕೂ ಹೆಚ್ಚು Dance Bars ಮೇಲೆ ಪೊಲೀಸರಿಂದ ದಾಳಿ

Bengaluru ನಲ್ಲಿ 17ಕ್ಕೂ ಹೆಚ್ಚು Dance Bars ಮೇಲೆ ಪೊಲೀಸರಿಂದ ದಾಳಿ

- Advertisement -
- Advertisement -

Bengaluru: ಬೆಂಗಳೂರಿನ ವಿವಿಧ ಪ್ರದೇಶಗಳ ಡ್ಯಾನ್ಸ್ ಬಾರ್ ಗಳ (dance bars) ಮೇಲೆ ಗುರುವಾರ ತಡರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕ್ಲಬ್ ಒನ್, ರಂಬಾ, ಬ್ರಿಗೇಡ್ ಬ್ಲೂ ಸೇರಿದಂತೆ 17ಕ್ಕೂ ಹೆಚ್ಚು ಬಾರ್ ಗಳು ಒಳಗೊಂಡಿವೆ.

ಪಾಲಿಸಿಯವರ ಪ್ರಕಾರ, ಈ ಬಾರ್ ಗಳು ಸಮಯ ಮೀರಿ ಓಪನ್ ಇದ್ದವು, ಅಲ್ಲದೆ ಕೆಲವಿನಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದರು. ಇವು ಎಲ್ಲಾ ಕಾನೂನು ಉಲ್ಲಂಘನೆಗೆ ಕಾರಣವಾಗಿದ್ದು, ಪೊಲೀಸರು ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ.

ಕಬ್ಬನ್ ಪಾರ್ಕ್, ಅಶೋಕ್ ನಗರ, ಎಸ್.ಜೆ.ಪಾರ್ಕ್, ಉಪ್ಪಾರಪೇಟೆ ಸೇರಿದಂತೆ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ದಾಳಿ ನಡೆದಿದೆ. ನಿಯಮ ಉಲ್ಲಂಘಿಸಿರುವ ಬಾರ್ ಗಳ ವಿರುದ್ಧ ಕೇಸುಗಳು ದಾಖಲಾಗಿವೆ.

ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಕಾರುಗಳನ್ನು ಕದ್ದುಕೊಂಡು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಮೇಶ್, ತಬ್ರೇಜ್, ಜಬೀರ್ ಖಾನ್ ಬಂಧಿತರು.

ಅವರಿಂದ 12 ಲಕ್ಷ ರೂ. ಮೌಲ್ಯದ 6 ಓಮ್ನಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್ ಟ್ರ್ಯಾಕ್ಟರ್ ಕಳವು ಮಾಡಿಕೊಂಡು ಮಾರಾಟ ಮಾಡುತ್ತಿದ್ದೆ. 2020ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಟ್ರ್ಯಾಕ್ಟರ್ ಕಳ್ಳತನ ಕೇಸಿನಲ್ಲಿ ಬಂಧನೆಯಾಗಿದ್ದ ಅವರು ನಂತರ ಜಾಮೀನಿನಲ್ಲಿ ಹೊರಬಂದಿದ್ದರು.

ಇತ್ತೀಚೆಗಷ್ಟೇ ಈ ಗ್ಯಾಂಗ್ ಮೇ ತಿಂಗಳಲ್ಲಿ ವಿದ್ಯಾರಣ್ಯಪುರದಿಂದ ಒಂದು ಕಾರು ಕದ್ದಿದ್ದರೂ, ಅದನ್ನು ಸಿಸಿ ಟಿವಿ ದೃಶ್ಯದಲ್ಲಿ ದೃಢಪಡಿಸಲಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page