
ವ್ಯಾಟಿಕನ್ ನಗರದಲ್ಲಿರುವ ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis dies) ಇಂದು ಬೆಳಿಗ್ಗೆ 7:35 ಕ್ಕೆ ನಿಧನರಾದರು. ಅವರ ವಯಸ್ಸು 88 ವರ್ಷ. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ನ್ಯುಮೋನಿಯಾ ಸೋಂಕಿನಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು.
ಪೋಪ್ ಫ್ರಾನ್ಸಿಸ್ ಅವರ ನಿಧನದ ಸುದ್ದಿ ತಿಳಿದ ನಂತರ, ಪ್ರಪಂಚದಾದ್ಯಂತ ಕೋಟ್ಯಂತರ ಕ್ಯಾಥೋಲಿಕರು ದುಃಖದಲ್ಲಿ ಮುಳುಗಿದ್ದಾರೆ. ಕಳೆದ ವಾರದಿಂದ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ಫೆಬ್ರವರಿ 14ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರು ನ್ಯುಮೋನಿಯಾದ ತೀವ್ರ ರೂಪದಿಂದ ಪೀಡಿತರಾಗಿದ್ದಾರೆ ಎಂದು ತಿಳಿಸಿದ್ದರು.
ಅನಾರೋಗ್ಯದಿಂದಾಗಿ, ಅವರು ಕಳೆದ ವಾರ ನಡೆಯಬೇಕಿದ್ದ ಕ್ಯಾಥೋಲಿಕ್ ಚರ್ಚ್ ವರ್ಷದಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ನಿಗದಿಯಾಗಿದ್ದ ಅನೇಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು. ವೈದ್ಯರು ಅವರಿಗೆ ಸಂಪೂರ್ಣ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದರು.
ಪೋಪ್ ಅವರ ನಿಧನವನ್ನು ವ್ಯಾಟಿಕನ್ ನ ಅಧಿಕೃತ ಹೇಳಿಕೆಯಲ್ಲಿ ಕಾರ್ಡಿನಲ್ ಕೆವಿನ್ ಫಾರೆಲ್ ಪ್ರಕಟಿಸಿದರು. ಅವರು ವ್ಯಾಟಿಕನ್‌ನ ಆಡಳಿತಾತ್ಮಕ ಹುದ್ದೆಯಾದ ‘ಕಾಮರ್ಲೆಂಗೊ’ ಸ್ಥಾನದಲ್ಲಿ ಇದ್ದವರು.
ಇತ್ತೀಚೆಗೆ ಈಸ್ಟರ್ ಭಾಷಣದಲ್ಲಿ ಪೋಪ್ ಫ್ರಾನ್ಸಿಸ್ ಧಾರ್ಮಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತನಾಡಿದ್ದರು. “ವಿವಿಧ ಅಭಿಪ್ರಾಯಗಳಿಗೆ ಗೌರವ ಕೊಡುವ ಮನೋಭಾವ ಮತ್ತು ಧಾರ್ಮಿಕ ಸ್ವಾತಂತ್ರ್ಯ ಇಲ್ಲದಿದ್ದರೆ, ಶಾಂತಿ ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಯಹೂದಿ ವಿರೋಧಿ ಮನಸ್ಥಿತಿ ಹೆಚ್ಚುತ್ತಿರುವುದನ್ನು ಖಂಡಿಸಿದ್ದ ಅವರು, ರಗಾಜಾ ಯುದ್ಧದ ವಿರೋಧ ವ್ಯಕ್ತಪಡಿಸಿದ್ದರು ಹಾಗೂ ಶಾಂತಿಯ ಬೆನ್ನತ್ತಲು ಕದನ ವಿರಾಮಕ್ಕೆ ಕರೆ ನೀಡಿದ್ದರು.