Search
WhatsApp alerts

Home › News

Israel-Palestine ಯುದ್ಧಕ್ಕೆ ಪರಿಹಾರ ಹುಡುಕಲು ಪೋಪ್ ಲಿಯೋ ಒತ್ತಾಯ

administrator · Published

Pope Leo urges solution to Israel-Palestine war

Rome: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ (Israel-Palestine) ನಡುವೆ ನಡೆಯುತ್ತಿರುವ ಯುದ್ಧಕ್ಕೆ ಶಾಶ್ವತ ಪರಿಹಾರ ಹುಡುಕುವುದೇ ಏಕೈಕ ಮಾರ್ಗ ಎಂದು ವ್ಯಾಟಿಕನ್ ಪೋಪ್ ಲಿಯೋ XIV ಹೇಳಿದ್ದಾರೆ.

ಅವರು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಜೊತೆ ನಡೆದ ಸಭೆಯಲ್ಲಿ ಗಾಜಾದಲ್ಲಿ ಶಾಶ್ವತ ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆ ಮತ್ತು ಪ್ಯಾಲೆಸ್ತೀನಿಯನ್ನರಿಗೆ ಮಾನವೀಯ ನೆರವು ಅಗತ್ಯವಿದೆ ಎಂದು ಒತ್ತಾಯಿಸಿದರು.

ಪೋಪ್ ಲಿಯೋ ಅವರೊಂದಿಗೆ ವ್ಯಾಟಿಕನ್‌ನ ಉನ್ನತ ರಾಜತಾಂತ್ರಿಕರು ಸಹ ಹಾಜರಿದ್ದರು. ಹೆರ್ಜಾಗ್ ಅವರು ಪೋಪ್ ಅವರನ್ನು ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿ ಮಾಡಲು ವಿನಂತಿಸಿ, ಅವರನ್ನು ಬಿಡಿಸುವ ನಿಟ್ಟಿನಲ್ಲಿ ಜಾಗತಿಕ ಒತ್ತಡ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ವ್ಯಾಟಿಕನ್ ಹೇಳಿಕೆಯಲ್ಲಿ, “ಸದ್ಭಾವನೆ ಮತ್ತು ಅಂತರರಾಷ್ಟ್ರೀಯ ಬೆಂಬಲದೊಂದಿಗೆ ಒತ್ತೆಯಾಳುಗಳ ಬಿಡುಗಡೆ ಸಾಧ್ಯ. ಶಾಶ್ವತ ಕದನ ವಿರಾಮ ತಕ್ಷಣ ಜಾರಿಯಾಗಬೇಕು. ಮಾನವೀಯ ಕಾನೂನಿಗೆ ಗೌರವ ತೋರಬೇಕು ಹಾಗೂ ಎರಡೂ ದೇಶಗಳ ಜನರ ಆಶಯಗಳನ್ನು ಪೂರೈಸಬೇಕು” ಎಂದು ತಿಳಿಸಲಾಗಿದೆ.

ಪೋಪ್ ಲಿಯೋ ಅವರು ಪ್ಯಾಲೆಸ್ತೀನ್ ಪರ ತಮ್ಮ ದೀರ್ಘಕಾಲದ ಬೆಂಬಲವನ್ನು ಪುನರುಚ್ಚರಿಸಿದ್ದು, ಎರಡು ರಾಷ್ಟ್ರಗಳ ನಡುವೆ ಪರಿಹಾರ ಕಂಡುಕೊಳ್ಳುವುದು ಮಾತ್ರ ಯುದ್ಧದ ಅಂತ್ಯಕ್ಕೆ ದಾರಿ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ, ಹೆರ್ಜಾಗ್ ಅವರು ಇಸ್ರೇಲ್ ಶಾಂತಿ, ನೆಮ್ಮದಿ ಮತ್ತು ಸ್ಥಿರತೆಯ ಕಡೆ ಬದ್ಧವಾಗಿದೆ. ಪ್ಯಾಲೆಸ್ತೀನಿಯನ್ನರಿಗೆ ನೆರವು ತಲುಪಿಸಲು ಪ್ರಯತ್ನಿಸುತ್ತಿದೆ ಎಂದರು.

ಇದು ಅಮೆರಿಕನ್ ಪೋಪ್ ಒಬ್ಬರು ಇಸ್ರೇಲ್ ರಾಷ್ಟ್ರದ ಮುಖ್ಯಸ್ಥರನ್ನು ನೇರವಾಗಿ ಭೇಟಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ. ಈ ಹಿಂದೆ ಪೋಪ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.

ಗಾಜಾದಲ್ಲಿ ನಡೆದ ದಾಳಿಗಳು, ಚರ್ಚ್ ಮೇಲೆ ಬಿದ್ದ ಶೆಲ್ ಹಾಗೂ ನಾಗರಿಕರ ಸಾವಿನ ಹಿನ್ನೆಲೆಯಲ್ಲಿ ವ್ಯಾಟಿಕನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪೋಪ್ ಫ್ರಾನ್ಸಿಸ್ ಹಾಗು ಲಿಯೋ ಇಬ್ಬರೂ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳನ್ನು ಖಂಡಿಸಿದ್ದಾರೆ.

2023ರ ಅಕ್ಟೋಬರ್ 7ರಂದು ಹಮಾಸ್ ದಾಳಿ ವೇಳೆ 251 ಒತ್ತೆಯಾಳುಗಳನ್ನು ಹಿಡಿದುಕೊಂಡಿತ್ತು. ಆ ದಾಳಿಯಲ್ಲಿ ಸುಮಾರು 1,200 ಜನರು ಮೃತಪಟ್ಟಿದ್ದರು. ನಂತರದ ಕದನ ವಿರಾಮಗಳಲ್ಲಿ ಹಲವಾರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page