
Chikkaballapur : ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್(Pradeep Eshwar) ‘ಮನೆ ಮನೆಗೆ ಖಾತಾ ಅದಾಲತ್’ಗೆ (Mane Manege Khata Adalath) ನೇಮಿಸಿರುವ ನಗರಸಭೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಜೊತೆ (Meeting) ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು “ಫೆ.20ರಿಂದ 22ರವರೆಗೆ ಬೆಳಿಗ್ಗೆ 8ರಿಂದ ಸಂಜೆ 4.30ರವರೆಗೆ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ‘ಮನೆ ಮನೆಗೆ ಖಾತಾ ಅದಾಲತ್’ ನಡೆಯಲಿದ್ದು ಸ್ವತ್ತುಗಳ ಮಾಲೀಕರು ಯಾವುದೇ ದಲ್ಲಾಳಿಗಳನ್ನು ಆಶ್ರಯಿಸದೆ ಖಾತೆಗಳನ್ನು ಪಡೆಯಬೇಕು. ನೇಮಕವಾಗಿರುವ ಸಿಬ್ಬಂದಿ ಬೆಳಿಗ್ಗೆ 8ರಿಂದ ಸಂಜೆ 4.30ರವರೆಗೆ ನಿಗದಿ ಸ್ಥಳದಲ್ಲಿಯೇ ಇರಬೇಕು. ಅವರಿಗೆ ಅವರು ಇರುವ ಸ್ಥಳದಲ್ಲೇ ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುವುದು. ‘ಬಿ’ ಖಾತೆ ಮಾಡಿಸಿಕೊಳ್ಳಲು ಯಾರಿಗೂ ನಗರಸಭೆ ಕಚೇರಿ ಬಳಿ ಬನ್ನಿ ಎನ್ನಬಾರದು. ಅರ್ಜಿಗಳನ್ನು ಪಡೆದು ಅವುಗಳನ್ನು ಪರಿಶೀಲಿಸಲಾಗುತ್ತದೆ. ಬಿ’ ಖಾತೆ ನೀಡುವ ವೇಳೆ ನಗರಸಭೆ ಸಿಬ್ಬಂದಿ ಸ್ವತ್ತುಗಳ ಮಾಲೀಕರಿಂದ ಹಣ ಪಡೆದರೆ ಆ ಸಿಬ್ಬಂದಿ ವಿರುದ್ಧ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. 2024–25ನೇ ಸಾಲಿನ ತೆರಿಗೆಯನ್ನು ಎರಡು ಪಟ್ಟು ಮಾತ್ರ ಪಾವತಿಸಬೇಕು. ಯಾವುದೇ ಕಾರಣಕ್ಕೂ ಅದಕ್ಕಿಂತ ಹೆಚ್ಚಿನ ವರ್ಷಗಳ ತೆರಿಗೆಯನ್ನು ಪಾವತಿಸುವಂತಿಲ್ಲ. ನಾಗರಿಕರಿಗೆ ಸಂದೇಹಗಳು ಇದ್ದರೆ ನಗರಸಭೆ ಕಚೇರಿ ಹಾಗೂ ಶಾಸಕರ ಕಚೇರಿ ಸಂಪರ್ಕಿಸಬಹುದು” ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
The post ಮನೆ ಮನೆಗೆ ಖಾತಾ ಅದಾಲತ್: ಸಿಬ್ಬಂದಿ ಸಭೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.