New Delhi: ಭಾರತೀಯ ರೈಲ್ವೇ ವ್ಯವಸ್ಥೆವು ದೇಶದ ಆರ್ಥಿಕತೆಯ ಮುಖ್ಯ ಅಂಗವಾಗಿದೆ. ದಿನಂಪ್ರತಿಯೂ ಲಕ್ಷಾಂತರ ಜನರು ಪ್ರಯಾಣ ಮತ್ತು ಸರಕು ಸಾಗಣೆಗೆ ರೈಲುಗಳನ್ನು (Tejas Express) ಬಳಸುತ್ತಾರೆ. ಇತ್ತೀಚೆಗೆ ರೈಲ್ವೇಸ್ ಖಾಸಗೀಕರಣದ ದಿಸೆಯಲ್ಲಿ ಮುಂದೆ ಸಾಗುತ್ತಿದೆ.
ಐಆರ್ಸಿಟಿಸಿ (IRCTC) ಎಂಬ ಸಂಸ್ಥೆಯು ನಡೆಸುತ್ತಿರುವ ತೇಜಸ್ ಎಕ್ಸ್ಪ್ರೆಸ್ (Tejas Express) ಎಂಬ ಖಾಸಗಿ ರೈಲು, ಲಕ್ನೋ-ದೆಹಲಿ ಮಾರ್ಗದಲ್ಲಿ ಓಡುತ್ತಿದೆ. ಈ ರೈಲು ಅಕ್ಟೋಬರ್ 5ರಿಂದ ಚಾಲನೆಗೊಂಡು, ಅಕ್ಟೋಬರ್ 28ರ ವರೆಗೆ ಒಟ್ಟು 21 ದಿನ ಸಂಚರಿಸಿದೆ. ಈ ಅವಧಿಯಲ್ಲಿ 3.70 ಕೋಟಿ ರೂಪಾಯಿ ಟಿಕೆಟ್ ಮಾರಾಟವಾಗಿದ್ದು, 70 ಲಕ್ಷ ರೂಪಾಯಿಗೂ ಹೆಚ್ಚು ಲಾಭವಾಗಿದೆ.
ಇದು ಖಾಸಗಿ ರೀತಿಯಲ್ಲಿ ಓಡಿಸಲ್ಪಟ್ಟ ದೇಶದ ಮೊದಲ ಪ್ರಯೋಗಾತ್ಮಕ ಎಕ್ಸ್‌ಪ್ರೆಸ್ ರೈಲು. ಐಆರ್ಸಿಟಿಸಿ ಎಂಬ ಸಂಸ್ಥೆ ಇದನ್ನು ನಿರ್ವಹಿಸುತ್ತಿದೆ. ಸರ್ಕಾರವು ಇಂತಹ 150 ಖಾಸಗಿ ರೈಲುಗಳನ್ನು ಅನುಮತಿಸುವ ಯೋಜನೆಗೆ ಮುಂದಾಗಿದೆ.
ಐಆರ್ಸಿಟಿಸಿ ಸಂಪೂರ್ಣ ಖಾಸಗಿ ಸಂಸ್ಥೆ ಅಲ್ಲ. ಇದು ಭಾರತೀಯ ರೈಲ್ವೇಸ್ನ ಅಂಗ ಸಂಸ್ಥೆಯಾಗಿದ್ದು, ರೈಲು ಟಿಕೆಟ್ ಬುಕಿಂಗ್ ಹಾಗೂ ಇತರ ಸೇವೆಗಳನ್ನು ಒದಗಿಸುತ್ತದೆ. ಈಗ ಸರ್ಕಾರವು ರೈಲುಗಳ ನಿರ್ವಹಣೆಯಲ್ಲಿ ಖಾಸಗಿ ಪಾಲುದಾರಿಕೆಗೆ ಅವಕಾಶ ನೀಡುತ್ತಿದೆ.
ಇದು ಖಾಸಗೀಕರಣದ ಪ್ರಾರಂಭದ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲು ಸೇವೆಗಳನ್ನು ಖಾಸಗಿಗೆ ವಹಿಸುವ ನಿರೀಕ್ಷೆಯಿದೆ.