Home Sports Kabaddi Pro Kabaddi League – Day 1 ಮೊದಲ ದಿನದ ಆಟಗಳು

Pro Kabaddi League – Day 1 ಮೊದಲ ದಿನದ ಆಟಗಳು

ಪ್ರೊ ಕಬಡ್ಡಿ ಲೀಗ್ – ಆವೃತ್ತಿ 8 ರ ( Pro Kabaddi League – Season 8, PKL – 2021 ) ಮೊದಲ ದಿನವು ಅಭಿಮಾನಿಗಳಿಗೆ ರೋಮಾಂಚಕ ಕ್ಷಣಗಳನ್ನು ನೀಡಿತು.

ಪಂದ್ಯ 1: U Mumba Vs Bengaluru Bulls

ಆರಂಭಿಕ ಆಟದಲ್ಲಿ, Season 2 ರ ಚಾಂಪಿಯನ್ ಯು ಮುಂಬಾ (U Mumba) ಪಂದ್ಯಾವಳಿಯ ಫೇವರಿಟ್ ಬೆಂಗಳೂರು ಬುಲ್ಸ್ (Bengaluru Bulls) ವಿರುದ್ಧ ಜಯ ಸಾಧಿಸಿತು. ಪಂದ್ಯದಲ್ಲಿ ಅಭಿಷೇಕ್ ಸಿಂಗ್ 19 ರೇಡ್ ಪಾಯಿಂಟ್‌ಗಳೊಂದಿಗೆ ಯು ಮುಂಬಾ ಜಯಕ್ಕೆ ಕಾರಣರಾದರು. ಆಟದಲ್ಲಿ ತೋರಿದೆ ದುರ್ಬಲ ಡಿಫೆನ್ಸ್ ಪ್ರದರ್ಶನವು ಬೆಂಗಳೂರು ಬುಲ್ಸ್‌ನ ಸೋಲಿಗೆ ಕಾರಣವಾಯಿತು.

Pro Kabaddi League Season 8 PKL 2021 Day 1 Bengaluru Bulls U Mumba Game Kannada

ಪಂದ್ಯ 2: Telugu Titans Vs Tamil Thalaivas

ನಂತರ ನಡೆದ ತೆಲುಗು ಟೈಟಾನ್ಸ್ (Telugu Titans) ಮತ್ತು ತಮಿಳು ತಲೈವಾಸ್ (Tamil Thalaivas) ನಡುವಿನ ಎರಡನೇ ಪಂದ್ಯದಲ್ಲಿ ನಿಗದಿತ ನಲವತ್ತು ನಿಮಿಷಗಳ ಅವಧಿಯಲ್ಲಿ ಆಟವು ಅನೇಕ ರೋಚಕ ತಿರುವುಗಳನ್ನು ಪಡೆದು ಕಡೆಗೆ ಟೈ ನಲ್ಲಿ ಕೊನೆಗೊಂಡಿತು. ಟೈಟಾನ್ಸ್‌ನ ಸಿದ್ಧಾರ್ಥ್ ದೇಸಾಯಿ ( (Siddharth Desai) ಮತ್ತು ತಲೈವಾಸ್ ನ ಮಂಜೀತ್ ಚಿಲ್ಲರ್ (Manjeet Chhillar) ರೇಡಿಂಗ್ (raiding) ನಲ್ಲಿ ಮಿಂಚಿ ಇಬ್ಬರೂ ಸೂಪರ್ 10 ಅನ್ನು ಪಡೆದರು.

ಪಂದ್ಯ 3: Bengal Warriors Vs U.P. Yoddha

ಮೊದಲ ದಿನದ ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ಧ ಯುಪಿ ಯೋಧಾ (U.P. Yoddha) ಸೋಲನ್ನು ಕಂಡಿತು. ಪರ್ದೀಪ್ ನರ್ವಾಲ್ (pardeep Narwal) ಅವರ ಪ್ರಯತ್ನಗಳು ವಿಫಲವಾಗಿ, ಮೊಹಮ್ಮದ್ ನಬಿಬಕ್ಷ್ (Mohammad Nabibakhsh) ಅವರ ಆಲ್-ರೌಂಡ್ ಆಟವು ಸೀಸನ್ 7 ಚಾಂಪಿಯನ್‌ಗಳಿಗೆ ಈ ಪಂದ್ಯ ಗೆಲ್ಲುವಂತೆ ಮಾಡಿತು.

PKL 2021 Day – 1 Score Card

PKL 2021 ರ ಮೊದಲ ದಿನದ ಮೂರನೇ ಪಂದ್ಯದ ನಂತರ, U ಮುಂಬಾ ಉತ್ತಮ 16 ಅಂಕಗಳ Score Difference ನೊಂದಿಗೆ ಪ್ರೊ ಕಬಡ್ಡಿ ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್ ಎರಡನೇ ಸ್ಥಾನದಲ್ಲಿದ್ದರೆ ಟೈಟಾನ್ಸ್ ಮತ್ತು ತಲೈವಾಸ್ ತಲಾ ಮೂರು ಅಂಕಗಳನ್ನು ಹಂಚಿಕೊಂಡಿದ್ದಾರೆ.


Images: ProKabaddi

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version