ನಾಲ್ಕು ದಿನಗಳ ಮೂರು ಮೂರು ಆಟಗಳ ಹಣಾಹಣಿಯ ನಂತರ, ಪ್ರೊ ಕಬಡ್ಡಿ 2021 – ಆವೃತ್ತಿ 8 ರ ( Pro Kabaddi League) ಐದನೇ ದಿನವಾದ ಭಾನುವಾರದಂದು ದಿನದ ಪಂದ್ಯಾವಳಿಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಎರಡು ಬಾರಿಯ ರನ್ನರ್ ಅಪ್ ಗುಜರಾತ್ ಜೈಂಟ್ಸ್ (Gujarat Giants) ಕಳೆದ ಋತುವಿನ ಫೈನಲಿಸ್ಟ್ ದಬಂಗ್ ದಿಲ್ಲಿ ಕೆ.ಸಿ. (Dabang Delhi K.C.) ವಿರುದ್ಧ ಕಣಕ್ಕೆ ಇಳಿಯಿತು. ಎರಡನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls), ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors) ಅನ್ನು ಎದುರಿಸಿತು.
ಪಂದ್ಯ 1: Gujarat Giants Vs Dabang Delhi K.C.
2021 ರ ಪ್ರೊ ಕಬಡ್ಡಿಯಲ್ಲಿ ಐದನೇ ದಿನದ ಮೊದಲನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಕೆ.ಸಿ. (Dabang Delhi K.C.) ಯ ಗೆಲುವಿನ ಸರಣಿಯನ್ನು ಗುಜರಾತ್ ಜೈಂಟ್ಸ್ (Gujarat Giants) ಟೈ ಆಟದೊಂದಿಗೆ ಕೊನೆಗೊಳಿಸಿತು. ಒಂದು ಪಾಯಿಂಟ್ ಮುನ್ನಡೆ ಹೊಂದಿದ್ದ ಜೈಂಟ್ಸ್ ವಿರುದ್ಧ ಬಜರ್ ರೈಡ್‌ನಲ್ಲಿ ಜೈಂಟ್ಸ್ ಒಂದು ಅಂಕ ಪಡೆದು ಟೈ (24-24) ಆಗುವಂತೆ ಮಾಡಿದರು. ಇದು ಎರಡು ತಂಡಗಳ ನಡುವೆ ಡ್ರಾಗೆ ಕಾರಣವಾಯಿತು.
ನವೀನ್ ಕುಮಾರ್ (Naveen Kumar) 11 ರೇಡ್ ಪಾಯಿಂಟ್‌ಗಳೊಂದಿಗೆ ಪಂದ್ಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದರು. ಗುಜರಾತ್ ಜೈಂಟ್ಸ್ ಪರ ರಾಕೇಶ್ ನರ್ವಾಲ್ (Rakesh Narwal) 7 ಟಚ್ ಪಾಯಿಂಟ್ ಮತ್ತು 2 ಬೋನಸ್ ಪಾಯಿಂಟ್ ಗಳಿಸಿದರೆ ನಾಯಕ ಸುನಿಲ್ ಕುಮಾರ್ 4 ಅಂಕ ಗಳಿಸಿದರು.
ಪಂದ್ಯ 2: Bengaluru Bulls vs Bengal Warriors
ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್‌ನ (Bengal Warriors) ಗೆಲುವಿನ ಓಟವನ್ನು ಬೆಂಗಳೂರು ಬುಲ್ಸ್ (Bengaluru Bulls) 36-35 ಅಂಕಗಳೊಂದಿಗೆ ಮುರಿಯಿತು. ಬೆಂಗಾಲ್ ಪರವಾಗಿ ಮಣಿಂದರ್ ಸಿಂಗ್ (Maninder Singh) 17 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು, ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.
ಪವನ್ ಸೆಹ್ರಾವತ್ (Pawan Sehrawat) ಬುಲ್ಸ್ ಪರ ಸೂಪರ್ 10 ಗಳಿಸಿದರೆ, ಕೊನೆಯ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದು ಎರಡು-ಪಾಯಿಂಟರ್ ದಾಳಿಯನ್ನು ನಿಲ್ಲಿಸಿದ ಡಾಂಗ್ ಜಿಯೋನ್ ಲೀ (Dong Geon Lee) ಪಂದ್ಯದ ಹೀರೋ ಆದರು. ಬೆಂಗಾಲ್ ಪರವಾಗಿ ಮಣಿಂದರ್ ಸಿಂಗ್ 17 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.
PKL 2021 Day – 5 Score Card
PKL 2021 ರ ಐದನೇ ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ
Image courtesy : Pro Kabaddi