Home Sports Kabaddi Pro Kabaddi League – January 8, 2022 ದಿನದ ಆಟಗಳು

Pro Kabaddi League – January 8, 2022 ದಿನದ ಆಟಗಳು

Pro Kabaddi 2021 – ಆವೃತ್ತಿ 8 ರ ಜನವರಿ 8 ರಂದು ಬೆಂಗಳೂರಿನಲ್ಲಿ ಮೂರು ಪಂದ್ಯಗಳ ಹಣಾಹಣಿಯೊಂದಿಗೆ ಮುಂದುವರೆಯಿತು. ರಾತ್ರಿಯ ಮೊದಲ ಪಂದ್ಯದಲ್ಲಿ ಕಳೆದ ಋತುವಿನ ರನ್ನರ್‌ ಅಪ್ ದಬಾಂಗ್ ಡೆಲ್ಲಿ K.C. (Dabang Delhi K.C.), ಯುಪಿ ಯೋಧಾ (U.P. Yoddha) ಮುಖಾಮುಖಿಯಾದವು.

ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ಯು ಮುಂಬಾ (U Mumba), ತೆಲುಗು ಟೈಟಾನ್ಸ್‌ (Telugu Titans) ವಿರುದ್ಧ ಸೆಣಸಿದರು. ಮೂರನೇ ಪಂದ್ಯವು ಪಾಟ್ನಾ ಪೈರೇಟ್ಸ್ (Patna Pirates) ಮತ್ತು ಗುಜರಾತ್ ಜೈಂಟ್ಸ್ (Gujarat Giants) ನಡುವೆ ರೆಮ್ಯಾಚ್ ನೊಂದಿಗೆ ಕೊನೆಗೊಂಡಿತು.

ಪಂದ್ಯ 1: U.P. Yoddha Vs Dabang Delhi K.C.

U.P. Yoddha Vs Dabang Delhi K.C. Pro Kabaddi League 2021

ದಿನದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ. (Dabang Delhi K.C.), ಯುಪಿ ಯೋಧಾ (U.P. Yoddha) ವಿರುದ್ಧ 37-33 ಅಂಕಗಳ ಗೆಲುವಿನೊಂದಿಗೆ ಪಂದ್ಯಾವಳಿಯಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರೆಸಿದರು.

ದಬಾಂಗ್ ಡೆಲ್ಲಿ ಕೆ.ಸಿ. ಪರ ನವೀನ್ ಕುಮಾರ್ (Naveen Kumar) 17 ರೇಡ್ ಅಂಕಗಳನ್ನು, ವಿಜಯ್ (Vijay) 7 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.

ಯುಪಿ ಯೋಧಾ ಪರ ಪರ್ದೀಪ್ ನರ್ವಾಲ್ (Pardeep Narwal) ಮತ್ತು ಸುರೇಂದರ್ ಗಿಲ್ (Surender Gill) ತಲಾ 9 ಅಂಕಗಳನ್ನು ಗಳಿಸಿದರು.

ಪಂದ್ಯ 2: U Mumba Vs Telugu Titans

ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ (U Mumba), ತೆಲುಗು ಟೈಟಾನ್ಸ್ (Telugu Titans) ತಂಡದ ವಿರುದ್ಧ 48-38 ಅಂಕಗಳ ಭಾರೀ ಅಂತರದ ಗೆಲುವನ್ನು ಸಾಧಿಸಿತು.

ಯು ಮುಂಬಾ ಪರ ಅಭಿಷೇಕ್ ಸಿಂಗ್ (Abhishek Singh) 13 ರೇಡ್ ಪಾಯಿಂಟ್‌, V ಅಜಿತ್ ಕುಮಾರ್ (V Ajith Kumar) 8 ರೇಡ್ ಪಾಯಿಂಟ್‌, ರಿಂಕು (Rinku) High 5 ಅನ್ನು ಪಡೆದರು.

ಟೈಟಾನ್ಸ್‌ ಪರ ಮುಹಮ್ಮದ್ ಶಿಯಾಸ್ (Muhammed Shihas) High 5 ಗಳಿಸಿದರು.

ಪಂದ್ಯ 3: Gujarat Giants Vs Patna Pirates

ದಿನದ ಮೂರನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ರೋಚಕ ಮುಖಾಮುಖಿಯಲ್ಲಿ 27-26 ಅಂಕಗಳೊಂದಿಗೆ ಗುಜರಾತ್ ಜೈಂಟ್ಸ್ (Gujarat Giants) ಅನ್ನು ಸೋಲಿಸಿತು.

ಪೈರೇಟ್ಸ್ ಪರ ಪ್ರಶಾಂತ್ ಕುಮಾರ್ ರೈ (Prashanth Kumar Rai) 8 ರೇಡ್ ಪಾಯಿಂಟ್‌, ಸಚಿನ್ (Sachin) 6 ಅಂಕಗಳನ್ನು ಗಳಿಸಿದರು.

ಜೈಂಟ್ಸ್ ಪರ ಮಹೇಂದ್ರ ರಜಪೂತ್ (Mahendra Rajput) 7 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು.

PKL 2021 – January 8, 2022 Score Card

PKL 2021 ರ January 8, 2022 ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ


Image: Pro Kabaddi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version