CM Siddaramaiah: “ಕರ್ನಾಟಕವನ್ನು ಎಲ್ಲರಿಗೂ ಶಾಂತಿಯ ತೋಟವನ್ನಾಗಿ ಉಳಿಸೋಣ, ಸಾಮರಸ್ಯ ಮತ್ತು ಅಭಿವೃದ್ಧಿಯಿಂದ ಬಲಿಷ್ಠ ಭಾರತ ಕಟ್ಟೋಣ.”
ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ 79ನೇ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
- ಒಕ್ಕೂಟ ಸರ್ಕಾರದ ವಿರುದ್ಧ ಅಸಮಾಧಾನ
- ತೆರಿಗೆ ಹಾಗೂ ಸಂಪನ್ಮೂಲ ಹಂಚಿಕೆಯಲ್ಲಿ ನಿಷ್ಪಕ್ಷಪಾತತೆ ಇಲ್ಲ.
- ಐಟಿ, ಇ.ಡಿ, ಸಿಬಿಐ ಮುಂತಾದ ಸಂಸ್ಥೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ.
- ನಾಗರಿಕರು ಧ್ವನಿಯೆತ್ತಬೇಕು.
- ಗ್ಯಾರಂಟಿ ಯೋಜನೆಗಳ ಪ್ರಭಾವ
- 2023ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಯೋಜನೆ ಜಾರಿ.
- ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ – ₹96,000 ಕೋಟಿ ವೆಚ್ಚ.
- ಶಕ್ತಿ ಯೋಜನೆಯಿಂದ ಮಹಿಳೆಯರ ಕಾರ್ಮಿಕ ಶಕ್ತಿ ಭಾಗವಹಿಸುವಿಕೆ 23% ಹೆಚ್ಚಳ.
- ಹೊಸ 5,049 ಬಸ್‌ಗಳು, 8,473 ಸಿಬ್ಬಂದಿ ನೇಮಕ.
- ಆರ್ಥಿಕ ಪ್ರಗತಿ
- ಕರ್ನಾಟಕ ತಲಾದಾಯದಲ್ಲಿ ದೇಶದ ಮೊದಲ ಸ್ಥಾನ.
- 10 ವರ್ಷಗಳಲ್ಲಿ ತಲಾದಾಯ ಶೇ.101ರಷ್ಟು ಏರಿಕೆ.
- ಜನ ಕಲ್ಯಾಣಕ್ಕೆ ₹1.12 ಲಕ್ಷ ಕೋಟಿ ವೆಚ್ಚ.
- ಅಸಮಾನತೆ ಮತ್ತು ತೆರಿಗೆ ಭಾರ
- ಶ್ರೀಮಂತರಲ್ಲಿ 80% ಸಂಪತ್ತು, ಆದರೆ GST ಪಾವತಿ ಕೇವಲ 3%.
- ಉಳಿದ 90% ಜನ 97% GST ಪಾವತಿ.
- ಅಸಮಾನತೆ ಕಡಿಮೆ ಮಾಡಲು ಗ್ಯಾರಂಟಿ ಯೋಜನೆ.
- ಒಳಮೀಸಲಾತಿ ಮತ್ತು ಜಾತಿ ಗಣತಿ
- ಹಿಂದುಳಿದ ವರ್ಗಗಳ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ.
- ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಚಾರ ಗಂಭೀರ ಪರಿಗಣನೆ.
- ಕೃಷಿ ಕ್ಷೇತ್ರದ ಸಾಧನೆ
- ಉತ್ತಮ ಮಳೆ, ಅಣೆಕಟ್ಟೆಗಳು ತುಂಬಿ ರೈತರ ಸಂತೋಷ.
- 2024-25ರಲ್ಲಿ 164 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ – 447% ಏರಿಕೆ.
- ಯೂರಿಯಾ ಪೂರೈಕೆ ಕೊರತೆಯ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ಒತ್ತಾಯ.
- ಕೈಗಾರಿಕಾ ಬೆಳವಣಿಗೆ
- 18 ವಿಶೇಷ ಹೂಡಿಕೆ ಪ್ರದೇಶಗಳು.
- ₹10 ಲಕ್ಷ ಕೋಟಿ ಹೂಡಿಕೆ ಆಸಕ್ತಿ.
- ವಿದೇಶಿ ಹೂಡಿಕೆ ಎರಡನೇ ಸ್ಥಾನ.
- ಪ್ರವಾಸೋದ್ಯಮ ನೀತಿ ಜಾರಿಗೆ.
- ಶಿಕ್ಷಣ ಕ್ಷೇತ್ರ ಬಲವರ್ಧನೆ
- ₹65,000 ಕೋಟಿ ವೆಚ್ಚ.
- ವಸತಿ ಶಾಲೆಗಳಲ್ಲಿ 8.36 ಲಕ್ಷ ವಿದ್ಯಾರ್ಥಿಗಳು.
- 500 ಹೊಸ KPS ಶಾಲೆಗಳು.
- 53 ಲಕ್ಷ ಮಕ್ಕಳಿಗೆ ಪೌಷ್ಟಿಕ ಆಹಾರ.
- ತಾಂತ್ರಿಕ ಶಿಕ್ಷಣಕ್ಕೆ 13 ಹೊಸ ಸಂಸ್ಥೆಗಳು.
- ಯುವಜನ ಕೌಶಲ್ಯ ಮತ್ತು ಮಹಿಳಾ ಸಬಲೀಕರಣ
- “ನನ್ನ ವೃತ್ತಿ, ನನ್ನ ಆಯ್ಕೆ” – 2.3 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ಯೋಜನೆ.
- “ಅಕ್ಕ ಕೆಫೆ” ರಾಜ್ಯಾದ್ಯಂತ.
- 1,000+ ಸ್ಟಾರ್ಟ್‌ಅಪ್ ಗಳಿಗೆ ಬೆಂಬಲ.
- ಬೆಂಗಳೂರು ಅಭಿವೃದ್ಧಿ ಯೋಜನೆಗಳು
- ₹1.35 ಲಕ್ಷ ಕೋಟಿ ವೆಚ್ಚದಲ್ಲಿ ರಸ್ತೆ, ಮೆಟ್ರೋ, ನೀರು, ಉದ್ಯಾನ, ಟ್ರಾಫಿಕ್ ಸುಧಾರಣೆ.
- ಇ-ಖಾತಾ, ಎ-ಖಾತಾ ವ್ಯವಸ್ಥೆ.
- 2ನೇ ಹಂತ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ.
- ನೀರಿನ ಮರುಬಳಕೆ
- 926 ಕೆರೆಗಳು ಮತ್ತು 143 ಚೆಕ್-ಡ್ಯಾಂಗಳಿಗೆ ಮರುಬಳಕೆ ನೀರು.
- ಯುಎನ್ ಪ್ರಶಂಸೆ.
- ಕಲ್ಯಾಣ ಕರ್ನಾಟಕ ಅಭಿವೃದ್ಧಿ
- ಪ್ರತಿವರ್ಷ ₹5,000 ಕೋಟಿ.
- 1,150 ಕಿ.ಮೀ. ರಸ್ತೆ ಅಭಿವೃದ್ಧಿ.
- ನವೀಕರಿಸಬಹುದಾದ ಇಂಧನ
- ಗಾಳಿ, ಬಿಸಿಲು, ನೀರು ಬಳಸಿ 24,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ.
- ಕಂದಾಯ ಇಲಾಖೆಯ ಸುಧಾರಣೆ
- 40,000 ಅಳತೆ ಕೆಲಸ ಮುಗಿತು.
- 1.11 ಲಕ್ಷ ಹಕ್ಕುಪತ್ರ ವಿತರಣೆ.
- 3,300 ಹಳ್ಳಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ.
- ಆರೋಗ್ಯ ಕ್ಷೇತ್ರದ ಸಾಧನೆ
- ಹೃದಯ ಜ್ಯೋತಿ ಯೋಜನೆ ವಿಸ್ತರಣೆ.
- ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಆರೈಕೆ ಕೇಂದ್ರ.
- ತಾಯಂದಿರ ಮರಣ ಪ್ರಮಾಣ 26% ಕಡಿತ.