back to top
21 C
Bengaluru
Friday, October 10, 2025
HomeNewsPSL 2025: ಶಾಹೀನ್ ಅಫ್ರಿದಿಯ ವಿಶೇಷ ದಾಖಲೆ

PSL 2025: ಶಾಹೀನ್ ಅಫ್ರಿದಿಯ ವಿಶೇಷ ದಾಖಲೆ

- Advertisement -
- Advertisement -

ಕ್ರಿಕೆಟ್ ಪಂದ್ಯಗಳಲ್ಲಿ, ಬ್ಯಾಟರ್ ತನ್ನ ಮೊದಲ ಎಸೆತದಲ್ಲೇ ಔಟಾದರೆ ಅದು “ಗೋಲ್ಡನ್ ಡಕ್” ಎಂದು ಕರೆಯಲಾಗುತ್ತದೆ. ಇನ್ನು ಅವನು ತನ್ನ ಎರಡನೇ ಎಸೆತದಲ್ಲೇ ಶೂನ್ಯಕ್ಕೆ ಔಟಾದರೆ, ಅದನ್ನು “ಸಿಲ್ವರ್ ಡಕ್” ಎಂದು ಕರೆಯಲಾಗುತ್ತದೆ. ಪಾಕಿಸ್ತಾನ್ ಸೂಪರ್ ಲೀಗ್ (PSL) 2025 ನಲ್ಲಿ ಶಾಹೀನ್ ಅಫ್ರಿದಿ (Shaheen Afridi’) ತನ್ನ ಮೊದಲ ಓವರ್ ನಲ್ಲೇ ಇಬ್ಬರನ್ನು ಸಿಲ್ವರ್ ಡಕ್ ಅಂದರೆ ಶೂನ್ಯಕ್ಕೆ ಔಟ್ ಮಾಡಿದರು, ಇದು ಹೊಸ ದಾಖಲೆ ಸೃಷ್ಟಿಯಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್ 10ನೇ ಸೀಸನ್‌ನಲ್ಲಿ, ಶಾಹೀನ್ ಅಫ್ರಿದಿ ವಿಶೇಷ ಸಾಧನೆ ಮಾಡಿದರು. ಕರಾಚಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳು ಎದುರಿಸಿದ್ದರು. ಟಾಸ್ ಗೆದ್ದ ಲಾಹೋರ್ ಖಲಂದರ್ಸ್ ತಂಡದ ನಾಯಕ ಶಾಹೀನ್ ಅಫ್ರಿದಿ ಬ್ಯಾಟಿಂಗ್ ಆಯ್ದುಕೊಂಡರು. ಫಖರ್ ಝಮಾನ್ 76 ರನ್ ಹಾಗೂ ಡೇರಿಲ್ ಮಿಚೆಲ್ 75 ರನ್ ಗಳಿಸಿ ತಂಡವು 201 ರನ್ ದಾಖಲಿಸಿತು.

202 ರನ್ ಗುರಿಯನ್ನು ಬೆನ್ನತ್ತಿದ ಕರಾಚಿ ಕಿಂಗ್ಸ್ ಆರಂಭದಲ್ಲೇ ಆಘಾತವನ್ನು ಅನುಭವಿಸಿತು. ಶಾಹೀನ್ ಅಫ್ರಿದಿ ಮೊದಲ ಓವರ್ನ 2ನೇ ಎಸೆತದಲ್ಲಿ ಡೇವಿಡ್ ವಾರ್ನರ್ (0) ಮತ್ತು 4ನೇ ಎಸೆತದಲ್ಲಿ ಜೇಮ್ಸ್ ವಿನ್ಸ್ (0) ಅವರನ್ನು ಸಿಲ್ವರ್ ಡಕ್‌ನಲ್ಲಿ ಔಟ್ ಮಾಡಿದರು.

ಈ ಮೂಲಕ, ಶಾಹೀನ್ ಅಫ್ರಿದಿ PSL ಇತಿಹಾಸದಲ್ಲಿ ಮೊದಲ ಓವರ್ ನಲ್ಲೇ  ಎರಡನೇ ಬ್ಯಾಟರ್‌ಗಳನ್ನು ಸಿಲ್ವರ್ ಡಕ್‌ನಲ್ಲಿ ಔಟ್ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆದಿದ್ದಾರೆ. ಇನ್ನು, PSL ಇತಿಹಾಸದಲ್ಲಿ ಮೊದಲ ಓವರ್ ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ಕೂಡ ಶಾಹೀನ್ ಪಡೆದಿದ್ದಾರೆ.

ಶಾಹೀನ್ ನೀಡಿದ ಆರಂಭಿಕ ಆಘಾತದಿಂದ, ಕರಾಚಿ ಕಿಂಗ್ಸ್ 19.1 ಓವರ್ ಗಳಲ್ಲಿ 136 ರನ್ ಗಳಿಸಿ ಆಲೌಟ್ ಆಗಿತು. ಲಾಹೋರ್ ಖಲಂದರ್ಸ್ 65 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು ಮತ್ತು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page