Home News IPL ಆಕರ್ಷಣೆಗೆ PSL ಬಲಿ? ಬಾಷ್‌ಗೆ PCB ಯಿಂದ ಲೀಗಲ್ ನೋಟಿಸ್

IPL ಆಕರ್ಷಣೆಗೆ PSL ಬಲಿ? ಬಾಷ್‌ಗೆ PCB ಯಿಂದ ಲೀಗಲ್ ನೋಟಿಸ್

Corbin Bosch

IPL 2025 ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಕ್ಷಿಣ ಆಫ್ರಿಕಾದ ವೇಗಿ ಕಾರ್ಬಿನ್ ಬಾಷ್ (Corbin Bosch) ಮುಂಬೈ ಇಂಡಿಯನ್ಸ್ ಆಫರ್ ಸ್ವೀಕರಿಸಿ ಪಾಕಿಸ್ತಾನ ಸೂಪರ್ ಲೀಗ್ (PSL) ನಿಂದ ಹಿಂದೆ ಸರಿದಿದ್ದಾರೆ. ಇದರಿಂದ ಕೋಪಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಾಷ್‌ ಗೆ ಕಾನೂನು ನೋಟಿಸ್ ಜಾರಿ ಮಾಡಿದೆ.

ಈ ನಿರ್ಧಾರವನ್ನು ತಾನೊಬ್ಬ ಕ್ರಿಕೆಟಿಗನಾಗಿ ತೆಗೆದುಕೊಂಡಿದ್ದು, IPL ಗೆ ಯಾವುದೇ ಅಗೌರವ ತೋರಿಸುವ ಉದ್ದೇಶ ಇಲ್ಲ ಎಂದು ಬಾಷ್ ಹೇಳಿದ್ದಾರೆ. “ಮುಂಬೈ ಇಂಡಿಯನ್ಸ್ ಬಲಿಷ್ಠ ಐಪಿಎಲ್ ತಂಡವಷ್ಟೇ ಅಲ್ಲ, ಇತರ ಲೀಗ್‌ಗಳಲ್ಲೂ ಫ್ರಾಂಚೈಸಿಗಳನ್ನು ಹೊಂದಿದೆ. ಈ ಆಫರ್ ತಿರಸ್ಕರಿಸಿದರೆ ನನ್ನ ವೃತ್ತಿಜೀವನಕ್ಕೆ ತೊಂದರೆಯಾಗುತ್ತಿತ್ತು. ಐಪಿಎಲ್ ನನ್ನ ಭವಿಷ್ಯಕ್ಕೆ ಉತ್ತಮ ಅವಕಾಶ ನೀಡುತ್ತದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಿಎಸ್ಎಲ್ ಫ್ರಾಂಚೈಸಿ ಪೇಶಾವರ್ ಝಲ್ಮಿ ಹರಾಜಿನಲ್ಲಿ ಬಾಷ್ ಅವರನ್ನು ಖರೀದಿಸಿತ್ತು. ಆದರೆ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗದ ಅವರು, ಲಿಜಾಡ್ ವಿಲಿಯಮ್ಸ್ ಗಾಯಗೊಂಡಾಗ ಮುಂಬೈ ಇಂಡಿಯನ್ಸ್ ತಂಡದಿಂದ ಕರೆ ಪಡೆದರು. ಈ ಅವಕಾಶವನ್ನು ಬಳಸಿಕೊಂಡು ಪಿಎಸ್ಎಲ್ಗೆ ಗುಡ್ ಬೈ ಹೇಳಿದರು.

ಪಿಸಿಬಿ ಇದೀಗ ಬಾಷ್‌ ವಿರುದ್ಧ ಐಪಿಎಲ್ ಮಾದರಿಯಲ್ಲಿ ಎರಡು ವರ್ಷಗಳ ನಿಷೇಧದ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ. ಆದರೆ, ಇಂತಹ ಕ್ರಮ ವಿದೇಶಿ ಆಟಗಾರರನ್ನು ಪಿಎಸ್ಎಲ್ನಿಂದ ದೂರವಿಡಬಹುದು ಎಂಬ ಆತಂಕವೂ ಎದುರಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version