back to top
26.3 C
Bengaluru
Friday, July 18, 2025
HomeBusinessVidhana Soudha ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ: ಸರ್ಕಾರದ ಹೊಸ ಪ್ರಯತ್ನ

Vidhana Soudha ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ: ಸರ್ಕಾರದ ಹೊಸ ಪ್ರಯತ್ನ

- Advertisement -
- Advertisement -

Bengaluru: ಕರ್ನಾಟಕ ಸರ್ಕಾರ ಹೊಸ ಯೋಜನೆಯೊಂದನ್ನು ಆರಂಭಿಸಿದೆ. ಇದರ ಮೂಲಕ ಸಾರ್ವಜನಿಕರು ಈಗಿನಿಂದ ವಿಧಾನಸೌಧದ (Vidhana Soudha) ಒಳಗೆ ಹೋಗಿ ವೀಕ್ಷಿಸಬಹುದಾಗಿದೆ. ಇದುವರೆಗೆ ಭವ್ಯವಾದ ಈ ಆಡಳಿತದ ಕಟ್ಟಡದ ಒಳಗೆ ನೋಟಕ್ಕೆ ಅವಕಾಶ ಇರಲಿಲ್ಲ. ಆದರೆ ಈಗ ಸರ್ಕಾರ “ವಿಧಾನಸೌಧ ಮಾರ್ಗದರ್ಶಿ ಪ್ರವಾಸ” ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಈ ಯೋಜನೆಯು ವಿಧಾನಸಭೆ, ವಿಧಾನ ಪರಿಷತ್ ಹಾಲ್ ಸೇರಿದಂತೆ ಹಲವಾರು ಐತಿಹಾಸಿಕ ಸ್ಥಳಗಳನ್ನು ಸಾರ್ವಜನಿಕರಿಗೆ ತೋರಿಸಲು ಯೋಜಿಸಲಾಗಿದೆ. ಈ ಪ್ರವಾಸವನ್ನು ಸ್ಪೀಕರ್ ಯು ಟಿ ಖಾದರ್ ಅವರು ಉದ್ದೇಶಪೂರ್ವಕವಾಗಿ ಪ್ರಾರಂಭಿಸಿದ್ದು, ಭದ್ರತಾ ಕ್ರಮಗಳನ್ನು ಕೂಡ ಜಾರಿಗೆ ತಂದಿದ್ದಾರೆ.

ಪ್ರವಾಸದ ಮುಖ್ಯ ಅಂಶಗಳು

  • ಪ್ರವಾಸದ ದಿನಗಳು: ಪ್ರತೀ ಭಾನುವಾರ ಹಾಗೂ 2ನೇ ಮತ್ತು 4ನೇ ಶನಿವಾರ
  • ಪ್ರಾರಂಭ ದಿನಾಂಕ: ಜೂನ್ 1 ರಿಂದ ಅಧಿಕೃತ ಪ್ರವಾಸ ಆರಂಭ
  • ಟಿಕೆಟ್ ಬುಕ್ಕಿಂಗ್: https://kstdc.co/activities ನಲ್ಲಿ online ನಲ್ಲಿ ಮುಂಚಿತವಾಗಿ ಬುಕ್ ಮಾಡಬೇಕು
  • ಟಿಕೆಟ್ ದರ
  • 16 ವರ್ಷ ಮೇಲ್ಪಟ್ಟವರಿಗೆ ₹50
  • 16 ವರ್ಷದೊಳಗಿನ ಮಕ್ಕಳಿಗೆ ಉಚಿತ
  • ಪ್ರವಾಸ ಸಮಯ: ಬೆಳಗ್ಗೆ 8 ಗಂಟೆ ರಿಂದ ಸಂಜೆ 5 ಗಂಟೆವರೆಗೆ
  • ಪ್ರತೀ ಬ್ಯಾಚ್: ದಿನಕ್ಕೆ ಪ್ರತೀ ಬ್ಯಾಚ್‌ನಲ್ಲಿ 30 ಜನರಂತೆ ವಿಧಾನಸೌಧ ವೀಕ್ಷಣೆ. ದಿನಕ್ಕೆ 300 ಮಂದಿಗೆ ಮಾತ್ರ ವಿಧಾ‌ನಸೌಧ ನೋಡುವ ಅವಕಾಶ.
  • ಪ್ರವಾಸ ಅವಧಿ: 1.5 ಗಂಟೆ (ಒಂದು ಬ್ಯಾಚ್), ಸುಮಾರು 1.5 ಕಿಮೀ ದೂರ
  • ಪ್ರವೇಶ ಗೇಟ್: ಗೇಟ್ ನಂಬರ್ 3 ಮೂಲಕ ಪ್ರವೇಶ
  • ಹಾಜರಾತಿ ಸಮಯ: ಪ್ರವಾಸಕ್ಕಿಂತ 20 ನಿಮಿಷ ಮೊದಲು ಹಾಜರಿರಬೇಕು
  • ಪಠ್ಯ ದಾಖಲೆ: ಗುರುತಿನ ಚೀಟಿ ತರಬೇಕು
  • ಫೋಟೋ ಅವಕಾಶ: ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ಫೋಟೋ ತೆಗೆದುಕೊಳ್ಳಬಹುದು
  • ಮಾಹಿತಿ ಮಾರ್ಗದರ್ಶಕರು: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗೈಡ್‌ಗಳು ಇರ್ತಾರೆ.

ಈ ಯೋಜನೆ ವಿಧಾನಸೌಧದ ಇತಿಹಾಸವನ್ನು ಜನತೆಗೆ ಪರಿಚಯಿಸಲು ನಿಟ್ಟಿದ ಸದುದ್ದೇಶದ ಕಾರ್ಯಕ್ರಮ. ಈಗಾಗಲೇ ಇಲ್ಲಿ ನಡೆದ ಪುಸ್ತಕ ಮೇಳ ಜನಮನ ಸೆಳೆದಿತ್ತು. ಇದೀಗ ಅಧಿಕೃತವಾಗಿ ಶಕ್ತಿ ಕೇಂದ್ರದ ಒಳಗಿನ ಭಾಗ ವೀಕ್ಷಿಸಲು ಅವಕಾಶ ದೊರೆಯುತ್ತಿರುವುದು ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಲ್ಲಿ ಸಂತೋಷ ತಂದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page