ಭಾರತದಲ್ಲಿ ಬಜಾಜ್ ಕಂಪನಿಯ(Bajaj company) Pulsar ಬೈಕ್ ಬಗ್ಗೆ ತಿಳಿಯದವರು ವಿರಳ. 2001 ರಲ್ಲಿ ಯುವಕರಿಗೆ ಸ್ಪೋರ್ಟಿ ಬೈಕ್ ಪ್ರೀತಿಯನ್ನು ಪರಿಚಯಿಸಿದ ಪಲ್ಸರ್, ಇಂದು ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ. ಈ ಬೈಕ್ ಈಗ 2 ಕೋಟಿ ಯುನಿಟ್ ಮಾರಾಟದ ಗಡಿಯನ್ನು ದಾಟಿದೆ.
ಸಾಧಾರಣ ಪ್ರಯಾಣಿಕ ಬೈಕ್ಗಳಿಗಿಂತ ಭಿನ್ನವಾಗಿ, ಪಲ್ಸರ್ ತನ್ನ ಮಸ್ಕುಲರ್ ಲುಕ್, ಶಕ್ತಿಶಾಲಿ ಎಂಜಿನ್ ಮತ್ತು ಉನ್ನತ ಮಟ್ಟದ ಪ್ರದರ್ಶನದಿಂದ ಮಾರುಕಟ್ಟೆಯನ್ನು ಶಾಶ್ವತವಾಗಿ ಬದಲಾಯಿಸಿತು. ವೇಗ, ದೊಡ್ಡ ಎಂಜಿನ್ ಸಾಮರ್ಥ್ಯ ಮತ್ತು ಉತ್ತಮ ಮೈಲೇಜ್ ಒಂದೇ ಬೈಕ್ ನಲ್ಲಿ ನೀಡಿದ ಭಾರತದ ಪ್ರಥಮ ಸ್ಪೋರ್ಟ್ಸ್ ಬೈಕ್ ಇದಾಗಿದೆ.
ಆರಂಭದಲ್ಲಿ ಕೇವಲ ವೇಗಪ್ರಿಯರನ್ನಷ್ಟೇ ಸೆಳೆದಿದ್ದ ಈ ಬೈಕ್, ಹೀಗೇ ಜನಪ್ರಿಯತೆಯನ್ನು ಪಡೆದು, 2007 ರಲ್ಲಿ ಪಲ್ಸರ್ 220F ಬಿಡುಗಡೆಯಾದ ನಂತರ ಅಪಾರ ಪ್ರಭಾವವಿಟ್ಟಿತು. ಆಕರ್ಷಕ ವಿನ್ಯಾಸ, ಶಕ್ತಿಯುತ ಎಂಜಿನ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಈ ಬೈಕ್ ಅನ್ನು ವಿಶೇಷವಾಗಿಸಿದೆ.
ಇತರ ಪ್ರೀಮಿಯಂ ಬೈಕ್ ಗಳಿಗಿಂತ ಕಡಿಮೆ ಬೆಲೆಯ ಕಾರಣದಿಂದ ಇದು ಹೆಚ್ಚಿನ ಜನರನ್ನು ಆಕರ್ಷಿಸಿದೆ. 2001 ರಿಂದ 2018ರೊಳಗೆ ಈ ಬೈಕ್ 1 ಕೋಟಿ ಮಾರಾಟ ಸಾಧಿಸಿದರೆ, ಮುಂದಿನ 1 ಕೋಟಿ ಮಾರಾಟ ಕೇವಲ 6 ವರ್ಷಗಳಲ್ಲೇ (2019-2025) ನಡೆದಿದೆ.
ಪಲ್ಸರ್ ಈಗ 20ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿದ್ದು, ಲ್ಯಾಟಿನ್ ಅಮೆರಿಕಾ, ಆಗ್ನೇಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚಿನ ಬೇಡಿಕೆಯನ್ನಿಟ್ಟುಕೊಂಡಿದೆ. ಕೆಲವು ದೇಶಗಳಲ್ಲಿ ಇದು ದ್ವಿಚಕ್ರ ವಾಹನ ವಿಭಾಗದಲ್ಲಿ ಮೊದಲ ಅಥವಾ ಎರಡನೇ ಸ್ಥಾನದಲ್ಲಿದೆ.
150cc ಮತ್ತು 180cc ಮಾದರಿಗಳೊಂದಿಗೆ ಆರಂಭವಾದ ಪಲ್ಸರ್, ಈಗ 125cc ನಿಂದ 400cc ವರೆಗೆ 12 ವಿವಿಧ ಮಾದರಿಗಳೊಂದಿಗೆ ಲಭ್ಯವಿದೆ. ಈ ಬೈಕ್ ಪ್ರಪಂಚದಾದ್ಯಂತ 50 ದೇಶಗಳಲ್ಲಿ ಮಾರಾಟವಾಗುತ್ತಿದೆ.
2 ಕೋಟಿ ಮಾರಾಟವನ್ನು ಪೂರೈಸಿದ ಹಿನ್ನಲೆಯಲ್ಲಿ, ಬಜಾಜ್ ಆಯ್ದ ಪಲ್ಸರ್ ಮಾದರಿಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ಮಹಾರಾಷ್ಟ್ರ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಲಭ್ಯವಿರುವ ಈ ರಿಯಾಯಿತಿಗಳು ಸೀಮಿತ ಅವಧಿಗೆ ಮಾತ್ರ. ಪಲ್ಸರ್ 125 ನಿಯಾನ್ ಬೆಲೆ ರೂ. 84,493 ಕ್ಕೆ ಲಭ್ಯವಿದ್ದು, 125 ಕಾರ್ಬನ್ ಫೈಬರ್, 150 ಸಿಂಗಲ್ ಡಿಸ್ಕ್ ಮತ್ತು 150 ಟ್ವಿನ್ ಡಿಸ್ಕ್ ಬೈಕ್ ಗಳ ಮೇಲೂ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.
ನಿಮ್ಮ ಪ್ರದೇಶದ ರಿಯಾಯಿತಿಗಳ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಶೋ ರೂಂಗೆ ಭೇಟಿ ನೀಡಿ ಮತ್ತು ನಿಮ್ಮ ಡ್ರೀಮ್ ಬೈಕ್ ಖರೀದಿಸಿ!