back to top
27.9 C
Bengaluru
Saturday, August 30, 2025
HomeEntertainmentPuneeth Rajkumar ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ

Puneeth Rajkumar ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ

- Advertisement -
- Advertisement -

ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಬದುಕಿದ್ದರೆ ಈ ವರ್ಷದ ಮಾರ್ಚ್ 17ರಂದು 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅವರ ನೆನಪನ್ನು ಜೀವಂತವಾಗಿಡಲು ಅವರ ಅಭಿಮಾನಿಗಳು ಹಾಗೂ ಕುಟುಂಬದವರು ಸದಾ ಪ್ರಯತ್ನಿಸುತ್ತಿದ್ದಾರೆ.

ಈ ಬಾರಿ ಪುನೀತ್ ಅವರ 50ನೇ ಜನ್ಮದಿನದ ಪ್ರಯುಕ್ತ, ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ – ಅವರ ಸೂಪರ್ ಹಿಟ್ ಸಿನಿಮಾ ಅಪ್ಪು ಮತ್ತೆ ರೀ-ರಿಲೀಸ್ ಆಗಲಿದೆ.

ಪುನೇತ್ ರಾಜ್‌ಕುಮಾರ್ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ಮಾರ್ಚ್ 14ರಂದು (ಶುಕ್ರವಾರ) ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಮತ್ತೆ ತೆರೆ ಕಾಣಲಿದೆ. ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದು, ಇದನ್ನು ಕೇಳಿ ಫ್ಯಾನ್ಸ್ ಭಾರೀ ಖುಷಿಪಟ್ಟಿದ್ದಾರೆ.

2002ರಲ್ಲಿ ಬಿಡುಗಡೆಯಾದ ‘ಅಪ್ಪು’ ಚಿತ್ರವನ್ನು ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ, ಅದ್ಭುತ ಗೀತೆಗಳೊಂದಿಗೆ ಗುರು ಕಿರಣ್ ಸಂಗೀತ ಪ್ರೇಕ್ಷಕರ ಮನಗೆದ್ದಿತು.

ಈ ಚಿತ್ರಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಟೈಟಲ್ ನೀಡಿದ್ದು, ಪುನೀತ್ ಅವರನ್ನು ಕುಟುಂಬದಲ್ಲಿ ಪ್ರೀತಿಯಿಂದ ‘ಅಪ್ಪು’ ಎಂದು ಕರೆಯಲಾಗುತ್ತಿತ್ತು. ಈ ಹೆಸರೇ ಈ ಚಿತ್ರದಿಂದ ಅವರ ಕನಸಿನ ಪ್ರಾರಂಭವಾಯಿತು.

ಪುನೀತ್ ರಾಜ್‌ಕುಮಾರ್ ಅವರು 2021ರ ಅಕ್ಟೋಬರ್ 29ರಂದು ಅಕಾಲಿಕವಾಗಿ ನಿಧನರಾದರು. ಹೃದಯಾಘಾತದಿಂದ ಅವರು ನಮ್ಮನ್ನು ಬಿಟ್ಟುದನ್ನು ಅಭಿಮಾನಿಗಳು ಇನ್ನೂ ಒಪ್ಪಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆದರೆ, ಅವರ ಸಿನೆಮಾ ಹಾಗೂ ನೆನಪುಗಳು ಸದಾ ಪ್ರೇಕ್ಷಕರ ಹೃದಯದಲ್ಲಿ ಉಳಿಯುತ್ತವೆ.

ಈ ರೀ-ರಿಲೀಸ್ ಅಭಿಮಾನಿಗಳಿಗೆ ಪುನೀತ್ ಅವರ ನೆನಪನ್ನು ಇನ್ನಷ್ಟು ಹತ್ತಿರ ಮಾಡುವುದರಲ್ಲಿ ಅನುಮಾನವೇ ಇಲ್ಲ!

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page