Home Movies Kannada Puneeth Rajkumar ಸ್ಮರಣಾರ್ಥ ಹಾಡು ಬಿಡುಗಡೆ

Puneeth Rajkumar ಸ್ಮರಣಾರ್ಥ ಹಾಡು ಬಿಡುಗಡೆ

537
Puneeth Rajkumar Death Anniversary memory of Appu Song Release

 Bengaluru: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ (Karnataka Ratna Dr. Puneeth Rajkumar) ಅವರು ಇದೇ ಅಕ್ಟೋಬರ್ ಅಂತ್ಯಕ್ಕೆ ನಮ್ಮನ್ನು ಅಗಲಿ ಮೂರು ವರ್ಷಗಳು ತುಂಬುತ್ತಿವೆ. ಅವರು ಇಂದಿಗೂ ನಮ್ಮೊಂದಿಗೆಯೇ ಇದ್ದಾರೆ (memory of Appu) ಎಂಬ ಭಾವನೆ ಅಪಾರ ಅಭಿಮಾನಿಗಳು, ಕುಟುಂಬದವರಲ್ಲಿದೆ.

ಅಪ್ಪು ಸ್ಮರಣಾರ್ಥ ‘ಮರೆಯಲಾರೆವು ನಿನ್ನನ್ನು ನಾವು’ ಎಂಬ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವೆಂದರೆ ಸಾಹಿತಿ ಲಲಿತಾ ಗೊಯೆಂಕಾ ಅವರು, ಹಿಂದಿಯಲ್ಲಿ ರಚನೆ ಮಾಡಲಾಗಿದೆ. ಅದನ್ನು ಕನ್ನಡಕ್ಕೆ ‘ಮರೆಯಲಾರೆವು ನಿನ್ನನ್ನು ನಾವು’ ಅಪ್ಪು ಎಂದು ಅನುವಾದ ಮಾಡಲಾಗಿದೆ. ಈ ಹಾಡನ್ನು ಅಪ್ಪು ಪುಣ್ಯಸ್ಮರಣೆಯ ದಿನವೇ ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪ್ಪು ಎಂದರೆ ಇಷ್ಟಪಡದವರೇ ಇಲ್ಲ. ಅವರ ಸ್ಮರಣಾರ್ಥ ನಾವು ಸಹ ಮೂಲತಃ ಹಿಂದಿಯಲ್ಲಿ ಗೀತೆ ರಚನೆ ಮಾಡಿದ್ದೇವು. ಅದನ್ನು ಕನ್ನಡ ಭಾಷೆಗೆ ಶಿಕ್ಷಕ ಜ್ಞಾನಮೂರ್ತಿ ಅವರು ಅನುವಾದ ಮಾಡಿದ್ದಾರೆ. ‘ಮರೆಯಲಾರೆವು ನಿನ್ನನ್ನು ನಾವು’ ಅದ್ಭುತವಾಗಿ ಮೂಡಿ ಬಂದಿದೆ.

ಈ ಹಾಡು ಒಟ್ಟು 05 ನಿಮಿಷಗಳವರೆಗೆ ಕಾಲಾವಧಿ ಹೊಂದಿದೆ. ಈ ಹಾಡಿಗೆ ಬಂಗಾಳ ಮೂಲದ ಸಂಗೀತ ನಿರ್ದೇಶಕರಾದ ಪಿಂಟು ಮಲ್ಲಿಕ್ ಅವರು ಸಂಗಿತ ಸಂಯೋಜನೆ ಮಾಡಿದ್ದು, ಕನ್ನಡದ ನೆಲದಲ್ಲಿ ಹಾಡಿನ ಸೊಬಗು ಸೊಗಸಾಗಿದ್ದು, ಕೇಳುಗರಿಗೆ ಇಷ್ಟವಾಗುತ್ತದೆ.

ಅಪ್ಪು ಅವರ ಸ್ಮರಣಾರ್ಥ ಅಕ್ಟೋಬರ್ 29ರಂದು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ. ಅಂದು ಈ ಹಾಡನ್ನು ಅಪ್ಪು ಅಭಿಮಾನಿಗಳು ಕೇಳಿದರೆ ಹೆಚ್ಚು ಇಷ್ಟವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡದ ಸ್ಟಾರ್‌ ನಟ, ರಾಜ್‌ ಕುಟುಂಬದ ಕುಡಿಯಾದರೂ ಯಾವ ಹಮ್ಮು, ಬಿಮ್ಮು ಇಲ್ಲದೇ ಸರಳವಾಗಿ ಬದುಕಿದ ನಟ ಪುನೀತ್ ರಾಜ್ ಕುಮಾರ್ ಅವರ ನೋಡಲು ಇಂದಿಗೂ ಅವರ ಸಮಾಧಿ ಸ್ಥಳಕ್ಕೆ ಬರುತ್ತಿದ್ದಾರೆ.

ಅಕ್ಟೊಬರ್ 29ರಂದು ಪುನೀತ್ ಸಮಾಧಿಗೆ ರಾಜ್ ಕುಟುಂಬದ ಎಲ್ಲವೂ ಬಂದು ಪೂಜೆ ನೆರವೇರಿಸಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿ ಸಂಘ ಇನ್ನಿತರ ಕಡೆಗಳಲ್ಲಿ ಅಪ್ಪುವನ್ನು ಅಂದಿನ ದಿನ ಸ್ಮರಿಸಲಾಗುತ್ತದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page