Patna: ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಮತ ಕಳ್ಳತನ ಮೊದಲು ಗುಜರಾತ್‌ನಲ್ಲಿ ಪ್ರಾರಂಭವಾಯಿತು. 2014ರ ನಂತರ ಬಿಜೆಪಿಯು ಅದನ್ನು ರಾಷ್ಟ್ರಮಟ್ಟಕ್ಕೆ ತಂದುಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿದೆ. ಮಧ್ಯಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ ಕದ್ದುಕೊಂಡು ಗೆದ್ದಿದೆ. ಮಹಾರಾಷ್ಟ್ರದಲ್ಲಿ ಸುಮಾರು 1 ಕೋಟಿ ಹೆಚ್ಚುವರಿ ಮತಗಳನ್ನು ಸೇರಿಸಲಾಗಿದೆ, ಅವುಗಳೆಲ್ಲವೂ ಬಿಜೆಪಿ ಪರವಾಗಿವೆ ಎಂದು ಗಾಂಧಿ ಆರೋಪಿಸಿದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜನರ ಮತಗಳನ್ನು ಕದ್ದಿದ್ದಾರೆ, ಇದಕ್ಕೆ ಚುನಾವಣಾ ಆಯೋಗ ಸಹಕರಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಅಮಿತ್ ಶಾ ಹೇಳಿದಂತೆ, ಬಿಜೆಪಿ ಮುಂದಿನ 40 ವರ್ಷಗಳ ಕಾಲ ಅಧಿಕಾರದಲ್ಲಿರುತ್ತದೆ ಎಂಬ ವಿಶ್ವಾಸ, ಮತ ಕಳ್ಳತನದ ಆಧಾರದ ಮೇಲೇ ಇದೆ ಎಂದು ಅವರು ಟೀಕಿಸಿದರು.