Delhi: ಕೇಂದ್ರ ಸಚಿವ ಕಿರಣ್ ರಿಜಿಜು (Minister Kiren Rijiju) ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ತೀವ್ರವಾಗಿ ಮಾತಾಡಿದ್ದಾರೆ. “ರಾಹುಲ್ ಗಾಂಧಿಯು ಬುದ್ಧಿಯಿಲ್ಲದ ಮಗುವಲ್ಲ. ಅವರು ನೀಡುತ್ತಿರುವ ಹೇಳಿಕೆಗಳು ಭಾರತದ ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿವೆ. ದೇಶದ ವಿರುದ್ಧ ಇಂತಹ ಮಾತುಗಳನ್ನು ನಿಲ್ಲಿಸಬೇಕು,” ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆರ್ಥಿಕತೆ ಕುರಿತು ನೀಡಿದ ಟೀಕೆಗೆ ರಾಹುಲ್ ಬೆಂಬಲ ನೀಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಿಜಿಜು, “ಪ್ರತಿಪಕ್ಷದ ನಾಯಕನಾದ ರಾಹುಲ್ ಗಾಂಧಿಗೆ ಕನಿಷ್ಠ ಜವಾಬ್ದಾರಿ ಮತ್ತು ತಿಳಿವಳಿಕೆ ಇರಬೇಕು,” ಎಂದಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಮಂತ್ರಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆ “ಸತ್ತಿದೆ” ಎಂದು ತಿಳಿದಿದೆ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಈ ಹೇಳಿಕೆಗೆ ಕೆಲ ಕಾಂಗ್ರೆಸ್ ನಾಯಕರೂ ವಿರೋಧ ವ್ಯಕ್ತಪಡಿಸಿದ್ದಾರೆ.