Bengaluru: ಭಾರತೀಯ ರೈಲ್ವೆ ಇದೀಗ ಹೊಸ ಸೂಪರ್ ಅಪ್ಲಿಕೇಶನ್‌ನ್ನು ಪರಿಚಯಿಸಿದೆ. ಇದರ ಹೆಸರೇ ‘ರೈಲ್‌ಒನ್ (RailOne)’. ಈ ಆಪ್ ಮೂಲಕ ಒಂದು ಮಾತ್ರ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲೇ ಹಲವಾರು ರೈಲ್ವೆ ಸೇವೆಗಳನ್ನು ಪಡೆದುಕೊಳ್ಳಬಹುದು.
ಈ RailOne app ನಲ್ಲಿ ಏನು ಏನು ಮಾಡಬಹುದು?
- ಟಿಕೆಟ್ ಬುಕ್ಕಿಂಗ್ (ರಿಸರ್ವ್ ಮತ್ತು ಸಾಮಾನ್ಯ)
- ಪ್ಲಾಟ್‌ಫಾರ್ಮ್ ಟಿಕೆಟ್ ಖರೀದಿ
- ಮಾಸಿಕ ಪಾಸ್‌ಗಳು ಪಡೆಯಲು
- ರೈಲುಗಳ ನೈಜ-ಸಮಯದ ಮಾಹಿತಿ ನೋಡಲು
- PNR ಸ್ಥಿತಿ ಪರಿಶೀಲನೆ
- ಫುಡ್ ಆರ್ಡರ್ ಮಾಡಲು
- ದೂರು ದಾಖಲಿಸಲು ‘ರೈಲ್ ಮದದ್’ ಸೇವೆ
- TDR ಫೈಲ್ ಮಾಡಲು ಸಹ ಸಾಧ್ಯತೆ
RailOne ಆಪ್‌ನ ವಿಶೇಷತೆ?
- ಈ ಆಪ್‌ನ್ನು ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರ (CRIS) ಅಭಿವೃದ್ಧಿಪಡಿಸಿದೆ
- ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ
- ಬಳಸಲು ಸುಲಭವಾದ ಸರಳ ಯೂಐ (UI)
- ಒಂದೇ ಲಾಗಿನ್ ಮೂಲಕ ಎಲ್ಲ ಸೇವೆಗಳಿಗೆ ಪ್ರವೇಶ
- ಹಳೆಯ RailConnect ಅಥವಾ UTSonMobile ID ಬಳಸಿ ಲಾಗಿನ್ ಮಾಡಬಹುದು
ಈ RailOne ಆಪ್ ಪ್ರಯಾಣಿಕರಿಗೆ ನಿಜಕ್ಕೂ ತುಂಬಾ ಉಪಯುಕ್ತವಾಗಿದ್ದು, ರೈಲ್ವೆಯ ಡಿಜಿಟಲ್ ಸೇವೆಗಳಲ್ಲಿ ಹೊಸ ಹೆಜ್ಜೆಯಾಗಿದೆ. ಈಗಿನಿಂದ ನೀವು ವಿಭಿನ್ನ ಕಾರ್ಯಗಳಿಗಾಗಿ ಬೇರೆ ಬೇರೆ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಅವಶ್ಯಕತೆಯೇ ಇಲ್ಲ.