Ramanagara : ಮಾಗಡಿ (Magadi) ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಕೆಂಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ (KMF) ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಲಾಯಿತು.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ” ರಾಸುಗಳ ಆರೋಗ್ಯದ ಬಗ್ಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕು. ರೈತರು ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆಯನ್ನು ಮಾಡಿಸಬೇಕು ಇದರಿಂದ ಹಸುಗಳು ಸಾವನಪ್ಪಿದಾಗ ರೈತರಿಗೆ ವಿಮೆಯ ಹಣ ಲಬಿಭಿಸುತ್ತದೆ. ಸಂಘದಲ್ಲಿ ಹಾಲು ಹಾಕುವ ರೈತರಿಗೆ ಅನ್ಯಾಯವಾಗದಂತೆ ಲಾಭಾಂಶವನ್ನು ನಗದು ರೂಪದಲ್ಲಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಹಾಲು ಕರೆಯುವ ಯಂತ್ರ, ಹುಲ್ಲು ಕಟಾವು ಯಂತ್ರ ಹಾಗೂ ಮ್ಯಾಟ್ ಖರೀದಿಸಲು ರೈತರಿಗೆ ಸಹಾಯಧನ ನೀಡಲಾಗುವುದು” ಎಂದು ತಿಳಿಸಿದರು.
ಬಮೂಲ್ ನಿರ್ದೇಶಕ ರಾಜಣ್ಣ, ಜಿ.ಪಂ ಮಾಜಿ ಸದಸ್ಯ ಎಂ.ಕೆ. ಧನಂಜಯ, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಚ್ ಶಿವರಾಜ್, ಡೇರಿ ಅಧ್ಯಕ್ಷ ಕೆಂಚೇಗೌಡ, ಉಪಾಧ್ಯಕ್ಷ ಗೋವಿಂದಯ್ಯ, ನಿರ್ದೇಶಕರಾದ ಸಿದ್ದಲಿಂಗಯ್ಯ, ಬಸವರಾಜು, ಬಾಲಕೃಷ್ನ, ಕೆ. ಕೃಷ್ಣೇಗೌಡ, ನಂಜುಂಡ ಸ್ವಾಮಿ, ಎಂ.ನಾಗರಾಜು, ಕುಮಾರ್, ಭಾಗ್ಯಮ್ಮ, ಗಂಗಲಕ್ಷ್ಮಮ್ಮ, ಮಂಜುಳಾ, ಪರೀಕ್ಷಕ ಕೆ.ಎಚ್. ದರ್ಶನ್, ಬಮೂಲ್ ಅಧಿಕಾರಿಗಳಾದ ಜವರಯ್ಯ, ಡಾ.ಶ್ರೀಧರ್ ಉಪಸ್ಥಿತರಿದ್ದರು.