Ramanagara : ರಾಮನಗರ ಜಿಲ್ಲೆಯಲ್ಲಿ ಜನವರಿ 23 ರಂದು ರಾಷ್ಟ್ರಿಯ ಪಲ್ಸ್ ಪೋಲಿಯೊ (Pulse Polio Programme) ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಪ್ಪದೇ ತಮ್ಮ5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ರಾಕೇಶ್ ಕುಮಾರ್ ಜನವರಿ 23 ರಂದು ಬೂತ್‌ಗಳಲ್ಲಿ, 24 ಹಾಗೂ 25 ರಂದು ಗ್ರಾಮೀಣ ಪ್ರದೇಶ ಹಾಗೂ 24 ರಿಂದ 26 ವರೆಗೆ ನಗರ ಪ್ರದೇಶದ ಮನೆ- ಮನೆ ಭೇಟಿ ಮೂಲಕ ಮಕ್ಕಳನ್ನು ಗುರುತಿಸಿ ಈ ಬಾರಿ ಜಿಲ್ಲೆಯಲ್ಲಿ ಒಟ್ಟು 80,493 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಇದಕ್ಕಾಗಿ 550 ಲಸಿಕಾ ಕೇಂದ್ರಗಳು, 28 ಟ್ರಾನ್ಸಿಟ್ ತಂಡ, 24 ಸಂಚಾತಿ ತಂಡ, 2292 ಲಸಿಕೆ ಹಾಕುವವರು ಹಾಗೂ 120 ಮೇಲ್ವಿಚಾರಕರ ವ್ಯವಸ್ಥೆ ಮಾಡಲಾಗಿದೆ.ಬೆಸ್ಕಾಂ ಸಿಬ್ಬಂದಿ ಲಸಿಕೆ ಸಂಗ್ರಹಣೆಗೆ ನಿರಂತರ ವಿದ್ಯುತ್ ವ್ಯವಸ್ಥೆ ಮಾಡಬೇಕು. ಲಸಿಕೆ ಕಾರ್ಯಕ್ರಮಕ್ಕೆ ಅಂದಾಜು 101 ವಾಹನದ ಅವಶ್ಯಕತೆ ಇದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನಗಳ ವ್ಯವಸ್ಥೆ ಮಾಡಬೇಕು. ವಾಹನವು ಜನವರಿ 22 ರಂದು ಆರೋಗ್ಯ ಇಲಾಖೆ ತಿಳಿಸುವ ಸ್ಥಳಗಳಲ್ಲಿ ವರದಿಯಾಗಬೇಕು ಎಂದು ಹೇಳಿದರು.
ಆರ್.ಸಿ.ಎಚ್. ಅಧಿಕಾರಿ ಡಾ. ಪದ್ಮಾ , ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಡಿ.ಟಿ.ಒ ಡಾ. ಕುಮಾರ್, ಡಿಎಸ್ಓ ಡಾ. ಕಿರಣ್, ಡಿಎಲ್‌ಒ ಡಾ. ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್ ಸಭೆಯಲ್ಲಿ ಭಾಗವಹಿಸಿದರು.